"ಕೃಷಿಗುಚ್ಛ" ದಲ್ಲಿ ಕೃಷಿ ಬರಹಗಳು, ಕೃಷಿ ವೈಚಾರಿಕ ಬರಹಗಳು ಹಾಗೂ ಕೃಷಿಯಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆಯ ಬಗ್ಗೆ ವೈವಿಧ್ಯಮಯ ಲೇಖನಗಳಿವೆ. ೬೭ರ ಹರೆಯದ ಶ್ರೀಪಾದರಾವ್ ಎಂಬ ಕೃಷಿಕರ ಸಾಧನೆ, ಸಮೃದ್ಧಿ - ಪ್ಲಾಂಟ್ ಫ್ರೆಂಡ್ ಶಿಪ್ ಗುಂಪು, ನೆಲದೊಡಲ ಚಿಗುರು ಎಂಬ ಪುಸ್ತಕದ ಪರಿಚಯ, ಅಪ್ಪೆಮಿಡಿ, ಸಾವಯವ ದೃಢೀಕರಣ, ಕಾಳುಮೆಣಸಿನ ಶೀಘ್ರ ಸಸ್ಯೋತ್ಪಾದನೆ, ಹಲಸಿನ ಕಾಫಿ 'ಜಾಫಿ', ಸಿರಿಧಾನ್ಯಗಳ ಬಳಕೆಯ ಬಗ್ಗೆ ಜಿಜ್ಞಾಸೆ, ಕೃಷಿಯಲ್ಲಿ ಯುವಕರ ಉಪಸ್ಥಿತಿ, ಕೃಷಿಕನ ಕಣ್ಣಲ್ಲಿ ಬೆಂಗಳೂರೆಂಬ ಮಾಯಾನಗರಿ, ಪತ್ರಿಕೋದ್ಯಮದಲ್ಲಿ ಮೊಬೈಲ್ ಬಳಕೆ, ಹಲವಾರು ಕೃಷಿಸ್ನೇಹಿ ಜಾಲತಾಣಗಳು ಹಾಗೂ ಕೃತಕ ಬುದ್ಧಿಮತ್ತೆಯ ಆಪ್ಸ್, ಕೃಷಿಯಲ್ಲಿ ಡ್ರೋನ್ ಬಳಕೆ- ಇವು ಇಲ್ಲಿರುವ ಕೆಲವು ಲೇಖನಗಳು.
©2024 Book Brahma Private Limited.