ಸುಸ್ಥಿರ ಕೃಷಿ ಪಾಠಗಳು

Author : ನಾರಾಯಣ ರೆಡ್ಡಿ

Pages 120

₹ 100.00




Year of Publication: 2020
Published by: ಇನ್ಸ್ಟಿಟ್ಯೂಟ್ ಫಾರ್ ಕಲ್ಚರಲ್ ರಿಸರ್ಚ್ ಅಂಡ್ ಆಕ್ಷ್ಯನ್
Address: # 22 5ನೇ ಅಡ್ಡರಸ್ತೆ, ಮೈಕಲ್ ಪಾಳೆಯ, ನ್ಯೂ ತಿಪ್ಪಸಂದ್ರ, ಬೆಂಗಳೂರು

Synopsys

ಕೃಷಿಕ ಎಲ್. ನಾರಾಯಣ ರೆಡ್ಡಿ ಅವರು ರಚಿಸಿದ ಕೃತಿ-ಸುಸ್ಥಿರ ಕೃಷಿ ಪಾಠಗಳು. ಸಾವಯವ ಕೃಷಿಯನ್ನು ಕೈಗೊಂಡಿರುವ ಎಲ್., ನಾರಾಯಣ ರೆಡ್ಡಿ ಅವರು, ಅದರ ಮಹತ್ವವನ್ನು ಪ್ರತಿಪಾದಿಸಿದ ಕೃತಿ ಇದು. ಸುಸ್ಥಿರ ಕೃಷಿಗೆ ಅಗತ್ಯವಿದ್ದ ದೂರದೃಷ್ಟಿ, ಶ್ರಮ, ವಿವೇಚನೆ ಇತ್ಯಾದಿ ಅಂಶಗಳನ್ನು ಒಳಗೊಂಡ ಕೃತಿಯು, ರೈತರಿಗೆ ಕೃಷಿ ಜ್ಞಾನದ ಹೊಸ ವಿಸ್ತಾರಗಳನ್ನು ಹೆಚ್ಚಿಸುತ್ತದೆ ಮಾತ್ರವಲ್ಲ; ಕೃಷಿಯಲ್ಲಿಯ ಇವರ ಜ್ಞಾನದ ಆಳವು, ಕೃಷಿ ವಿಜ್ಞಾನಕ್ಕೂ, ವಿಜ್ಞಾನಿಗಳಿಗೂ ಹೊಸ ಸಾಧ್ಯತೆಗಳನ್ನು ತೋರುತ್ತದೆ.

About the Author

ನಾರಾಯಣ ರೆಡ್ಡಿ

ಕೃಷಿಕರಾದ ನಾರಾಯಣ ರೆಡ್ಡಿ ಅವರು ಸಾವಯವ ಕೃಷಿಯ ಪ್ರಾಮುಖ್ಯತೆ, ಅಗತ್ಯತೆಗಳನ್ನು ರಾಷ್ಟ್ರಮಟ್ಟದಲ್ಲಿ ಪ್ರತಿಪಾದಿಸಿ ನುಡಿದಂತೆಯೇ ನಡೆದವರು. ಸಾವಯವ ಕೃಷಿಗೆ ರಾಜ್ಯದಲ್ಲಿ ನೆಲೆ, ಸ್ಥೈರ್ಯ ಎರಡೂ ರೂಪಿಸಿಕೊಟ್ಟವರು. ಪ್ರಗತಿಪರ ರೈತ ಮತ್ತು ಕೃಷಿತಜ್ಞರಾಗಿದ್ದ ಅವರು ಮೂಲತಃ ದೊಡ್ಡಬಳ್ಳಾಪುರದವರು. ಇವರು ಸಾವಯವ ಕೃಷಿಯ ಸಾಧನೆಗಾಗಿ 'ನಾಡೋಜ ಪ್ರಶಸ್ತಿ'ಗೆ ಪಾತ್ರರಾಗಿದ್ದಾರೆ. ಕೃಷಿಗೆ ಸಂಬಂಧಿಸಿದಂತೆ ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ ಮಾತ್ರವಲ್ಲ ಕೃತಿಗಳನ್ನು ರಚಿಸಿದ್ದಾರೆ. ‘ಸುಸ್ಥಿರ ಕೃಷಿ ಪಾಠಗಳು’ ಅವರ ಪ್ರಕಟಿತ ಕೃತಿ. ...

READ MORE

Related Books