ಗ್ರಾಮೀಣ ಜನರು ತಮ್ಮ ಬದುಕನ್ನು ಕಟ್ಟಿಕೊಳ್ಳುವಲ್ಲಿ ಪಶುಸಾಕಣೆ ಕೆ ಕಸುಬು ಯಾವ ರೀತಿಯಲ್ಲಿ ಗ್ರಾಮೀಣ ಜನತೆಯ ಮೇಲೆ ಪರಿಣಾಮ ಬೀರಿದೆ ಎಂಬುದನ್ನು ಉಭಯ ಲೇಖಕರು ಈ ಕೃತಿಯಲ್ಲಿ ತಿಳಿಯಪಡಿಸಿದ್ದಾರೆ. ಮಾನವನು ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಹೋಗಲು ಆರಂಭಿಸಿದ ನಂತರ ನಾನ ರೀತಿಯ ಕಸುಬನ್ನು ಕಂಡುಕೊಂಡಾಗ ಗ್ರಾಮೀಣ ಭಾಗಗಳಲ್ಲಿ ಪಶುಸಾಕಣೆ ಒಂದು ಉಪಕಸುಬಾಗಿ ಪರಿಣಾಮ ಬೀರಿತು. ಪಶುಸಾಕಣಿಕೆ ಎಂಬುದು ಪರಂಪರೆಯಿಂದ ಹಾದು ಬಂದಂತಹ ವೃತ್ತಿಯಾಗಿದೆ ಎಂಬುದನ್ನು ಈ ಕೃತಿಯೂ ಸ್ಪಷ್ಟಪಡಿಸುತ್ತದೆ. ನಂತರ ಇದರ ಲಯವನ್ನು ಕಂಡುಕೊಂಡಾಗ ಮನುಷ್ಯನು ಇದನ್ನು ತಮ್ಮ ಪ್ರಮುಖ ವೃತ್ತಿಯನ್ನಾಗಿ ರೂಡಿಸಿಕೊಂಡದರ ಬಗೆ, ಪಶುಸಾಕಣೆಯ ವೈವಿಧ್ಯತೆ, ಸಂಪ್ರದಾಯಗಳು, ಜನಪದ ಜನರ ಗ್ರಹಿಕೆಗಳು, ಅವರ ಶ್ರದ್ಧೆ, ಆಸಕ್ತಿಗಳನ್ನು ಆಳವಾಗಿ ಯೋಚನೆ ಮಾಡುವಂತೆ ಮಾಡಿದೆ.
©2024 Book Brahma Private Limited.