ಮೋಡ, ಮಳೆ ಮತ್ತು ಬೆಳೆ

Author : ಎ.ಎಸ್. ಕುಮಾರಸ್ವಾಮಿ

Pages 248

₹ 200.00




Year of Publication: 2018
Published by: ಗೀತಾಂಜಲಿ ಪುಸ್ತಕ ಪ್ರಕಾಶನ
Address: ಶಿವಮೊಗ್ಗ

Synopsys

ಮೋಡ, ಮಳೆ ಮತ್ತು ಬೆಳೆ ಒಂದಕ್ಕೊಂದು ಅವಿನಾಭವ ನಂಟು ಇದೆ. ಈ ಕೃತಿಯಲ್ಲಿ ನೀರಿನ ಸ್ವರೂಪ ಮತ್ತು ಲಕ್ಷಣಗಳು, ವಾತಾವರಣದಲ್ಲಿ ನೀರಾವಿ, ವಾತಾವರಣದಲ್ಲಿ ಗಾಳಿಯ ಚಲನೆ, ಭಾರತದ ಮಳೆ ಮಾರುತಗಳು, ಮೋಡದ ರಚನೆ, ಲಕ್ಷಣಗಳು ಮತ್ತು ಮಳೆ ಬೀಜಕಟ್ಟುವಿಕೆ, ಹವಾಮಾನದ, ವೈಪರಿತ್ಯಗಳು, ಹವಾಮಾನ ವರದಿ ಮತ್ತು ಮುನ್ಸೂಚನೆ, ವಿವಿಧ ಹಂಗಾಮುಗಳಲ್ಲಿ ಮಳೆ ಹಂಚಿಕೆ, ಮಳೆಯ ಅಳತೆ ಮತ್ತು ವಿಶ್ಲೇಷಣೆ, ಜಾಗತಿಕ ತಾಪಮಾನ ಏರಿಕೆಯಿಂದ ಅನೂಹ್ಯ ಬದಲಾವಣೆಗಳು, ಮಳೆ ಮತ್ತು ಮಣ್ಣು, ಮಣ್ಣು ನೀರು ಮತ್ತು ಬೆಳೆ, ಕೃಷಿಯಲ್ಲಿ ಮಳೆ ನೀರಿನ ಸಮರ್ಪಕ ಬಳಕೆ ಹಾಗೂ ಕುಡಿಯಲು ಮತ್ತು ಗೃಹ ಬಳಕೆಗೆ ನೀರು ವಿವಿಧ ವಿಷಯಗಳ ಸಮಗ್ರ ಮಾಹಿತಿ ಕೃತಿಯಲ್ಲಿದೆ. 

About the Author

ಎ.ಎಸ್. ಕುಮಾರಸ್ವಾಮಿ
(20 January 1953)

ಲೇಖಕ, ಕೃಷಿ ವಿಜ್ಞಾನಿ ಡಾ.ಎ.ಎಸ್. ಕುಮಾರಸ್ವಾಮಿ (ಅಬ್ಬಿಗೆರೆ ಶಿವಲಿಂಗಪ್ಪ ಕುಮಾರಸ್ವಾಮಿ) ಜನಿಸಿದ್ದು 1953 ಜನವರಿ 20 ರಂದು. ದಾವಣಗೆರೆ ಜಿಲ್ಲೆ ದೊಡ್ಡಬ್ಬೀಗೆರೆ ಗ್ರಾಮದವರು. ಸಂತೇಬೆನ್ನೂರಿನಲ್ಲಿ ಎಸ್‌ಎಸ್‌ಎಲ್‌ಸಿ ವರೆಗೂ ಶಿಕ್ಷಣ ಪಡೆದು, ಧಾರವಾಡ ಹಾಗೂ ಬೆಂಗಳೂರಿನಲ್ಲಿ ಕೃಷಿಯಲ್ಲಿ ಪದವಿ, ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಪಡೆದಿದ್ದಾರೆ. ಬೆಂಗಳೂರಿನ ಕೃಷಿ ಮಹಾವಿದ್ಯಾಲಯದಲ್ಲಿ ಶಿಕ್ಷಕರಾಗಿ ವೃತ್ತಿ ಆರಂಭಿಸಿ, ಪ್ರಾಧ್ಯಾಪಕರಾಗಿ, ವಲಯ ಕೃಷಿ ಸಂಶೋಧನ ಕೇಂದ್ರದಲ್ಲಿ ತಂಬಾಕು ಬೆಳೆ ಬೇಸಾಯ ಶಾಸ್ತ್ರಜ್ಞರಾಗಿ, ಹಾಸನ ಕೃಷಿ ಕಾಲೇಜು ಸ್ಥಾಪಕ ನಿರ್ದೇಶಕರು ಹಾಗೂ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಸಹ ಸಂಶೋಧನಾ ನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ತಮ್ಮ ಅನುಭವ, ...

READ MORE

Related Books