'ಭಾಗಾಯ್ತು,' ತೋಟದ ಬೆಳೆ ಕುರಿತ ಕೃತಿ. ಒಂದು ಮಟ್ಟ ಲೇಖನ ಬರೆಯಲು ಆರಂಭಿಸಿ. ಆದರೆ, ಅದು ಒಂದು ಪುಟ್ಟ ಲೇಖನಕ್ಕೆ ಸೀಮಿತವಾಗದೆ ಬೆಳೆದ ಬರಹ. ತೋಟದ ಬೆಳೆಗಳಲ್ಲಿಯೂ ಇರುವ ಜಾನಪದೀಯ ಕಥೆಗಳ ಬಗೆಗಿನ ಕುತೂಹಲ, ಇದರಿಂದಾಗಿ ತೋಟದ ಬೆಳೆ ಕುರಿತು ವಿಸ್ತಾರವಾಗಿ ಅಧ್ಯಯನ ಮಾಡಬೇಕೆಂಬ ಹಂಬಲ, ಅಧ್ಯಯನ ಮಾಡಲು ಆರಂಭಿಸಿದ ನಂತರ ಬಿಚ್ಚಿಕೊಳ್ಳಲಾರಂಬಿಸಿದ ಜಾನಪದೀಯ ಕಥಾನಕಗಳು ಹೀಗೆ ಇವೆಲ್ಲ ಸೇರಿ ರೂಪುಗೊಮಡಿರುವ ಪುಸ್ತಕ ಇದು. ಒಂದೊಂದು ತೋಟದ ಬೆಳೆಯ ಹಿಂದೆ ಒಂದೊಂದು ಕಥೆ ಇದೆ. ಈ ಕಥೆಗಳು ಮನುಷ್ಯ ಸಂಬಂಧದೊಡನೆ ಹುಟ್ಟಿಕೊಂಡವು, ಹೀಗೆ ಹುಟ್ಟಿಕೊಂಡ ಕಥೆಗಳು ಕೇಳುವುದಕ್ಕೆ ಹಿತಕರವಾಗಿವೆ.
©2025 Book Brahma Private Limited.