ಲೇಖಕ ನರೇಂದ್ರ ರೈ ದೇರ್ಲ ಅವರು ಕೃಷಿಯ ಬಗ್ಗೆ ಬರೆದ ಲೇಖನ ಸಂಕಲನ ಕೃಷಿ ಯಾಕೆ ಖುಶಿ?. "ಕೃಷಿ ಯಾಕೆ ಖುಷಿ" ಪುಸ್ತಕ ಓದೋಕೆ ಖುಷಿ ನೀಡುವ ಜೊತೆಗೆ ಅನೇಕ ಭಾವನೆಗಳನ್ನು, ತುಮುಲಗಳನ್ನು, ವಿಚಾರಗಳನ್ನು ಓದುಗರಿಗೆ ಸಮರ್ಥವಾಗಿ ವರ್ಗಾಯಿಸುವಲ್ಲಿ ಯಶಸ್ವಿಯಾಗುತ್ತದೆ. ಲೇಖಕ ನರೇಂದ್ರ ರೈ, ತಮ್ಮ ಸುತ್ತ ಮುತ್ತಲಿನ ಪರಿಸರದ ನಡುವೆ ಗುಡ್ಡದಂತೆ ಇರುವ ಆತಂಕಗಳನ್ನು ಹೇಳುತ್ತಾ ಹೋಗುವಾಗ ಅದ್ಯಾವುದೂ ಸುಳ್ಳೆನಿಸುವುದಿಲ್ಲ. ಹಳ್ಳಿಯ ಜನರ ಜೊತೆ ಸಾಂಗತ್ಯ ಹೊಂದಿದ ಪ್ರತಿಯೊಬ್ಬರಿಗೂ ಇದು ನನ್ನದೇ ಊರಿನ, ಮನೆಯ ಕಥೆ ಎನಿಸುತ್ತದೆ. ಅದರ ಜೊತೆಯೇ ಒಂದಷ್ಟು ಆಶಾವಾದದ ಕಥೆಗಳ ಮೂಲಕ, ಸಾಧಕರ ನಿದರ್ಶನಗಳ ಮೂಲಕ ಸಣ್ಣದಾದ ಭರವಸೆಯ ಕಿಡಿಯನ್ನು ಹೊತ್ತಿಸಿದ್ದಾರೆ ಲೇಖಕರು. ಮತ್ತದು ಅಗತ್ಯ ಸಹ!
©2024 Book Brahma Private Limited.