ಕರ್ನಾಟಕ ಸರ್ಕಾರ ಪ್ರಕಟಿಸಿದ ಅಂಕಿ-ಅಂಶಗಳನ್ನು ಆಧರಿಸಿಧ ಕೃತಿ ಇದು. ಪಂಚವಾರ್ಷಿಕ ಯೋಜನೆಗಳು, ಮಾನವ ಅಭಿವೃದ್ಧಿ ವರದಿ-1999, ಮಾನವ ಅಭಿವೃದ್ಧಿ ವರದಿ-2005 ಹಾಗೂ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಇರುವ ಉನ್ನತ ಮಟ್ಟದ ಸಮಿತಿಯ ವರದಿಗಳನ್ನು ಆಧರಿಸಿದೆ. ಪಂಚವಾರ್ಷಿಕ ಯೋಜನೆಗಳ ಅನ್ವಯ ಭೂಮಾಲೀಕರು, ಬಂಡವಾಳಿಗರು ಹಾಗೂ ಸಮಾಜದ ತಳಸ್ತರದಲ್ಲಿರುವ ಜನತೆ ಪಡೆದುಕೊಂಡಿರುವ ಯೋಜನೆಗಳ ಲಾಭವನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಸರ್ಕಾರಗಳ ಯೋಜನೆಗಳಲ್ಲಿಯ ಸಾಮ್ಯತೆಗಳು ಮತ್ತು ಕೇಂದ್ರದ ಯೋಜನೆಗಳ ಮಾದರಿಯನ್ನೇ ಕರ್ನಾಟಕ ಸರ್ಕಾರ ಅನುಸರಿಸಿದ್ದರ ಪರಿಣಾಮಗಳು ಇತ್ಯಾದಿ ಅಂಶಗಳು ಇಲ್ಲಿ ಚರ್ಚೆಗೆ ಒಳಪಟ್ಟಿವೆ.
©2025 Book Brahma Private Limited.