‘ಭೂ ಸ್ವಾದೀನದ ಸುತ್ತಾ’ ಕೃತಿಯು ಸಿ. ಯತಿರಾಜ್ ಅವರ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಕೃಷಿಗೆ ಹೆಚ್ಚಿನ ಆದ್ಯತೆ ನೀಡಿ ರೈತನ ಕೈಹಿಡಿದೆತ್ತಿ ಆಸರೆ ನೀಡಬೇಕಾಗಿದ್ದ ನಮ್ಮ ಸರ್ಕಾರಗಳು ಮಾಡುತ್ತಿರುವುದೇನು? ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಗಳನ್ನೇ ಹಬ್ಬಗಳ ರೀತಿಯಲ್ಲಿ ಏರ್ಪಡಿಸಿ ಪರೋಕ್ಷವಾಗಿ ರೈತನ ಕೊರಳಿಗೆ ನೇಣಿನ ಕುಣಿಕೆ ಬಿಗಿಯುತ್ತಿರುವ ಸರ್ಕಾರ ನಮಗೆ ಬೇಕೆ? ಬೃಹತ್ ಉದ್ಯಮ, ವ್ಯಾಪಾರ ಮಳಿಗೆಗಳೆಂಬ ದೊಡ್ಡ ಮಾಲ್‌ಗಳು, ಗಣಿಗಾರಿಕೆ – ಮುಂತಾದವನ್ನು ನಿರ್ಮಿಸಲು ನಮ್ಮ ಭೂಮಿಯನ್ನು ಗುತ್ತಿಗೆ ಆಧಾರದ ಮೇಲೆ ನೀಡಲಾಗುತ್ತದೆ. ಅಭಿವೃದ್ಧಿಶೀಲ ದೇಶಗಳಲ್ಲಿ ಹಣ ಹೂಡಲು ಜಗತ್ತಿನ ಶ್ರೀಮಂತರೆಲ್ಲ ತುದಿಗಾಲ ಮೇಲೆ ನಿಂತಿದ್ದಾರೆ. ಅವರಿಗನುಕೂಲವಾದ ಕಾನೂನುಗಳನ್ನು ಮಾಡಲಾಗುತ್ತದೆ. ಪ್ರತಿಭಟಿಸುವ ಚೈತನ್ಯವಿಲ್ಲದ ಹಳ್ಳಿಜನರು ಕೂಲಿ ಹುಡುಕಿಕೊಂಡು ನಗರಗಳತ್ತ ಮುಖ ಮಾಡಬೇಕಿದೆ. ಭೂಮಿ ನಿಜವಾಗಿ ಯಾರದ್ದು? ಹಣವುಳ್ಳ ಜನರು ಹಣಬಿತ್ತಿ ಹಣದ ಬೆಳೆ ತೆಗೆಯುವವರದ್ದೋ? ಸರ್ಕಾರದ್ದೋ ? ಧಾನ್ಯ ಬೆಳೆವ ರೈತನದೋ ? ಇಂದಿನ ಜ್ವಲಂತ ಸಮಸ್ಯೆಯೊಂದನ್ನು ಇಲ್ಲಿ ವಿವರವಾಗಿ ಪರಿಚಯಿಸಿ ಎಚ್ಚರಿಸಲಾಗಿದೆ.
(ಹೊಸತು, ಏಪ್ರಿಲ್ 2012, ಪುಸ್ತಕದ ಪರಿಚಯ)
"ಒ೦ದು ನಾಯಿಯನ್ನು ಕೊಲ್ಲಬೇಕೆಂದರೆ ಅದಕ್ಕೆ ಹುಚ್ಚುನಾಯಿ ಯೆಂದು ಹೆಸರಿಟ್ಟು ಕೊಲ್ಲು' ಈ ಪುಸ್ತಕದಲ್ಲೊಂದು ಕಡೆ ಬರುವ ಮಾತೊಂದು ಇಂದಿನ ಸರ್ಕಾರಗಳ ಮಾತೇ ಆಗಿರಬಹುದೇ? ಸಾವಿರಾರು ಎಕರೆ ಗಳಷ್ಟು ಕೃಷಿಯೋಗ್ಯ ಭೂಮಿಯನ್ನು ಬರಡು ಭೂಮಿಯೆಂದು ಘೋಷಿಸಿ ರೈತರಿಂದ ಸ್ವಾಧೀನಪಡಿಸಿಕೊಂಡು ವಿದೇಶಿ ಬಂಡವಾಳ ಹೂಡಿಕೆದಾರರಿಗೆ ನೀಡುವ ಮನೆಮುರುಕ ಸರ್ಕಾರ ಯಾರನ್ನು ಉದ್ಧರಿಸಲು ಹೊರಟಿದೆ? ಕೃಷಿಗೆ ಹೆಚ್ಚಿನ ಆದ್ಯತೆ ನೀಡಿ ರೈತನ ಕೈಹಿಡಿದೆತ್ತಿ ಆಸರೆ ನೀಡಬೇಕಾಗಿದ್ದ ನಮ್ಮ ಸರ್ಕಾರಗಳು ಮಾಡುತ್ತಿರುವುದೇನು ? ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಗಳನ್ನೇ ಹಬ್ಬಗಳ ರೀತಿಯಲ್ಲಿ ಏರ್ಪಡಿಸಿ ಪರೋಕ್ಷವಾಗಿ ರೈತನ ಕೊರಳಿಗೆ ನೇಣಿನ ಕುಣಿಕೆ ಬಿಗಿಯುತ್ತಿರುವ ಸರ್ಕಾರ ನಮಗೆ ಬೇಕೆ ? ಬೃಹತ್ ಉದ್ಯಮ, ವ್ಯಾಪಾರ ಮಳಿಗೆಗಳೆಂಬ ದೊಡ್ಡ ಮಾಲ್‌ಗಳು, ಗಣಿಗಾರಿಕೆ – ಮುಂತಾದವನ್ನು ನಿರ್ಮಿಸಲು ನಮ್ಮ ಭೂಮಿಯನ್ನು ಗುತ್ತಿಗೆ ಆಧಾರದ ಮೇಲೆ ನೀಡಲಾಗುತ್ತದೆ. ಅಭಿವೃದ್ಧಿಶೀಲ ದೇಶಗಳಲ್ಲಿ ಹಣ ಹೂಡಲು ಜಗತ್ತಿನ ಶ್ರೀಮಂತರೆಲ್ಲ ತುದಿಗಾಲ ಮೇಲೆ ನಿಂತಿದ್ದಾರೆ. ಅವರಿಗನುಕೂಲವಾದ ಕಾನೂನುಗಳನ್ನು ಮಾಡಲಾಗುತ್ತದೆ. ಪ್ರತಿಭಟಿಸುವ ಚೈತನ್ಯವಿಲ್ಲದ ಹಳ್ಳಿಜನರು ಕೂಲಿ ಹುಡುಕಿಕೊಂಡು ನಗರಗಳತ್ತ ಮುಖ ಮಾಡಬೇಕಿದೆ. ಭೂಮಿ ನಿಜವಾಗಿ ಯಾರದ್ದು ? ಹಣವುಳ್ಳ ಜನರು ಹಣಬಿತ್ತಿ ಹಣದ ಬೆಳೆ ತೆಗೆಯುವವರದ್ದೋ ? ಸರ್ಕಾರದ್ದೋ ? ಧಾನ್ಯ ಬೆಳೆವ ರೈತನದೋ ? ಇಂದಿನ ಜ್ವಲಂತ ಸಮಸ್ಯೆಯೊಂದನ್ನು ಇಲ್ಲಿ ವಿವರವಾಗಿ ಪರಿಚಯಿಸಿ ಎಚ್ಚರಿಸಲಾಗಿದೆ.
©2024 Book Brahma Private Limited.