ಮತ್ತೆ ಆ ಸಮೃದ್ಧಿಯೆಡೆಗೆ ಲೇಖನ ಬರಹದ ಪುಸ್ತಕವನ್ನು ಲೇಖಕ ವಿ.ಎನ್. ಮಂಜುನಾಥ್ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಕೃಷಿಯೋಗ್ಯ ಭೂಮಿ, ಇತರ ಪ್ರಕೃತಿದತ್ತ ಸಂಪನ್ಮೂಲಗಳನ್ನು ಪರಿಗಣಿಸಿದಲ್ಲಿ ಭಾರತವು ವಿಶ್ವದ ಭಾಗ್ಯಶಾಲಿ ಭೂಭಾಗಗಳಲ್ಲಿ ಪ್ರಮುಖವಾದದ್ದು. ಈಗ್ಗೆ ಇನ್ನೂರು ವರ್ಷ ಹಿಂದಿನವರೆಗೆ ದೇಶೀಯ ಹಾಗೂ ವಿದೇಶೀ ಪ್ರವಾಸಿಗರ ದಾಖಲೆಗಳು ಈ ದೇಶದಲ್ಲಿ ಉನ್ನತಮಟ್ಟದ ಕೃಷಿಯೂ ಆಹಾರಸಮೃದ್ಧಿಯೂ ಇದ್ದುದನ್ನು ಸ್ಫುಟಪಡಿಸಿವೆ. ಆದರೆ ಅಲ್ಪಕಾಲದಲ್ಲಿ ಸಮೃದ್ಧಿಯ ಸ್ಥಿತಿ ಹೋಗಿ ಅಭಾವದ ಸ್ಥಿತಿ ಉಂಟಾದುದು ಹೇಗೆ? ಮತ್ತು ಸ್ವಾತಂತ್ರ್ಯಾನಂತರವೂ ಆ ಸ್ಥಿತಿ ಮುಂದುವರಿದುದು ಹೇಗೆ ? ಈಗಿನ ಆಹಾರೋತ್ಪಾದನೆಯೂ ಬಳಕೆಯೂ ಕೆಳಮಟ್ಟದಲ್ಲಿಯೇ ಇವೆ. ಈ ವಾಸ್ತವತೆಯ ವೈಜ್ಞಾನಿಕ ವಿಶ್ಲೇಷಣೆ ಈ ಕಿರುಪುಸ್ತಕದಲ್ಲಿದೆ. ಹಾಗೂ ಹಿಂದಿನ ಸಮೃದ್ಧಿಯ ಸ್ಥಿತಿಯ ಮರುಗಳಿಕೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ದಿಶಾದರ್ಶನ ಇಲ್ಲಿದೆ.
©2024 Book Brahma Private Limited.