ಸುಸ್ಥಿರ ಕೃಷಿಗೆ ಹತ್ತಾರು ಹಾದಿ

Author : ಗಣೇಶ ಎಂ. ನೀಲೇಸರ



Year of Publication: 2013
Published by: ಕೃಷಿ ಮಾಧ್ಯಮ ಕೇಂದ್ರ
Address: ಧಾರವಾಡ- 580001

Synopsys

ಲೇಖಕ ಡಾ. ಗಣೇಶ ಎಂ. ನೀಲೇಸರ ಅವರ ಕೃತಿ ʻಸುಸ್ಥಿರ ಕೃಷಿಗೆ ಹತ್ತಾರು ಹಾದಿʼ. ಉತ್ತಮ ಯೋಜನೆ ಹಾಗೂ ಪರಿಶ್ರಮದ ನಿರ್ವಹಣೆಯಿಂದ ಸಣ್ಣ ಹಿಡುವಳಿಯಲ್ಲೂ ಸ್ವಾವಲಂಬಿ ಕೃಷಿ ಬದುಕು ಸಾಧ್ಯ ಎಂಬುದನ್ನು ತೋರಿಸಿಕೊಟ್ಟ ಬೆಂಗಳಿ ವೆಂಕಟೇಶ ಅವರ ಕುರಿತು ಈ ಪುಸ್ತಕದಲ್ಲಿ ಹೇಳುತ್ತಾರೆ. ಕೃಷಿಗೀಗ ಇಳಿಗಾಲ, ಕೃಷಿಕರಿಗೆ ಭವಿಷ್ಯವಿಲ್ಲ ಎಂಬ ಭಾವನೆ ಜನರ ಮನಸ್ಸಿನಲ್ಲಿ ದಟ್ಟವಾಗುತ್ತಿರುವ ಸದ್ಯದ ಸಂದರ್ಭದಲ್ಲಿ ಈ ಕುಟುಂಬ ಸಾಗುತ್ತಿರುವಂತಹ ಸ್ವಾವಲಂಬನೆಯ ಕಾಲುದಾರಿಗಳು, ಅವರ ಪ್ರಯತ್ನಗಳು ಎಲ್ಲರಿಗೂ ಮಾದರಿಯಾಗುವಂಥದ್ದು. ಈ ಮೂಲಕ ಸುಸ್ಥಿರತೆಯ ಹೆದ್ದಾರಿ ಕಟ್ಟಬೇಕಾದ ಅನಿವಾರ್ಯತೆ ಇದೆ ಎಂದು ಲೇಖಕರು ಇಲ್ಲಿ ಸೂಚಿಸುತ್ತಾರೆ.

About the Author

ಗಣೇಶ ಎಂ. ನೀಲೇಸರ

ಡಾ. ಗಣೇಶ ಎಂ. ನೀಲೇಸರ ಅವರು ಮೂಲತಃ ಶಿರಸಿಯವರು. ವೃತ್ತಿಯಲ್ಲಿ ಪಶುವೈದ್ಯರು. ಹವ್ಯಾಸವಾಗಿ ಶುರುವಾದ ಬರವಣಿಗೆ ಮುಂದೆ ಇವರು ಲೇಖನಗಳು ಹಾಗೂ ಪುಸ್ತಕ ಬರೆಯುವಂತೆ ಮಾಡಿದೆ. ತಮ್ಮ ದಿನನಿತ್ಯದ ಬದುಕಿನಲ್ಲಿ ಅನುಭವವಾಗುವ ಸನ್ನಿವೇಶಗಳನ್ನು ಬರೆಯುವ ಇವರ ಬರಹಗಳು ಸಾಮಾನ್ಯವಾಗಿ ಹಾಸ್ಯದಿಂದ ಕೂಡಿರುತ್ತವೆ. ...

READ MORE

Related Books