ಒಕ್ಕಲುತನ, ಆಹಾರ ಉತ್ಪಾದನೆ, ಧಾನ್ಯ ಸಂಗ್ರಹಕ್ಕೆ ಸಂಬಂಧಿಸಿದಂತೆ , ನಾಟಿ ಜನ ಕಂಡುಕೊಂಡ ತಂತ್ರ, ಪರಿಕರ, ಅವುಗಳ ಬಳಕೆ, ವಿನ್ಯಾಸ , ಉಪಯೋಗಿಸುವ ರೀತಿ ಹಲವು ವೈಶಿಷ್ಟ್ಯಗಳನ್ನು ಹೊಂದಿತ್ತು. ಆಧುನಿಕತೆಯೂ ಇವುಗಳ ಮೇಲೆ ದುಷ್ಪಪರಿಣಾಮ ಬೀರಿದ್ದರಿಂದ ನಂತರ ಇದು ನಶಿಸುತ್ತಾ ಹೋಯಿತು. ದೇಸಿ ಸೊಗಡಿನ ಪಲ್ಲಕ್ಕಿ, ಚಕ್ಕಡಿ, ವಡ್ಡರ ಬಂಡಿ, ಇಟ್ಟಿಗೆ, ಗಾರೆ ತಯಾರಿಕೆ, ಉಪ್ಪಿನ ಖೊಡಿ, ಮಿಣಿ, ದನದ ಕೊಟ್ಟಿಗೆ, ಗೊಬ್ಬರದ ಗುಂಡಿ, ಬೇಲಿ, ಒಡ್ಡು, ಕಣ, ಮಂಚಿಗೆ, ಬಣವೆ, ಗುಮ್ಮಿ ಮೊದಲಾದ ದೇಸಿ ಉಪಕರಣಗಳ, ಸಾಧನಗಳ ನಿರ್ಮಾಣ, ಕುಶಲತೆ, ಉಪಯೋಗಗಳ ಕುರಿತು ಉಭಯ ಕವಿಗಳು ಈ ಪುಸ್ತಕದಲ್ಲಿ ವಿವರಿಸಿದ್ದಾರೆ.
©2025 Book Brahma Private Limited.