‘ಬಿತ್ತೋಣ ಹತ್ತಿ ಬೆಳೆಯೋಣ’ ಧಾರವಾಡ ಆಕಾಶವಾಣಿಯಿಂದ ಪ್ರಸಾರವಾದ ಬಾನುಲಿ ಕೃಷಿ ಪಾಠಗಳ ಸಂಗ್ರಹ. ಹತ್ತಿಯಲ್ಲಿ ಸಮಗ್ರ ಕೃಷಿ ಪದ್ಧತಿಯು ಬಾನುಲಿ ಪಾಠದ ಉದ್ದೇಶ ಹಾಗೂ ರೂಪುರೇಷೆಗಳು, 2009-10ನೇ ಸಾಲಿನ ಹತ್ತಿ ಯೋಜನೆಗಳು ಹಾಗೂ ಸೌಲಭ್ಯಗಳು, ಮಣ್ಣು ಪರೀಕ್ಷೆ ಮತ್ತು ಮಣ್ಣಿನ ಆರೋಗ್ಯ ಸುಧಾರಣೆ, ಹತ್ತಿಯಲ್ಲಿ ಸಮಗ್ರ ಪೀಡೆ ನಿರ್ವಹಣೆ, ಎರೆಗೊಬ್ಬರ ತಯಾರಿಕೆ ಹಾಗೂ ಅಜೋಲಾ ಕೃಷಿ, ಹತ್ತಿ ಪರಿಸರ ವಿಶ್ಲೇಷಣೆ: ಮಿತ್ರ ಕೀಟಗಳು ಮತ್ತು ಶತ್ರುಕೀಟಗಳು, ನೀರಾವರಿ ಪದ್ಧತಿಗಳು: ಹತ್ತಿ ಬೆಳೆಯಲ್ಲಿ ನೀರು ನಿರ್ವಹಣೆ, ಲಘು ಪೋಷಕಾಂಶಗಳ ನಿರ್ವಹಣೆ, ಹತ್ತಿ ಬೆಳೆಯಲ್ಲಿ ಹೊದಿಕೆ ಅಳವಡಿಕೆ, ಸಸ್ಯಜನ್ಮ ಕೀಟನಾಶಕಗಳ ತಯಾರಿಕೆ ಹಾಗೂ ಬಳಕೆ, ಹತ್ತಿ ಬೆಳೆಯಲ್ಲಿ ಸಂರಕ್ಷಣ ಕ್ರಮಗಳು, ಪೂರಕ ಕಸುಬಾಗಿ ಪಶುಸಂಗೋಪನೆ, ಮಣ್ಣು ಮತ್ತು ನೀರಿನ ಸಂರಕ್ಷಣೆ ಸೇರಿದಂತೆ ಕೃಷಿಗೆ ಸಂಬಂಧಿಸಿದ ಹಲವಾರು ಮಹತ್ವದ ಲೇಖನಗಳು ಸಂಕಲನಗೊಂಡಿವೆ.
©2025 Book Brahma Private Limited.