ಕೃಷಿಸಂಶೋಧಕ, ಬರಹಗಾರರಾದ ಎಸ್. ಎಂ. ಪೆಜತ್ತಾಯ ಅವರ ಐದನೆಯ ಕೃತಿ ’ ರೈತನೊಬ್ಬನ ನೆನಪುಗಳು.’ ಕೃಷಿಯ ಬಗೆಗಿನ ಸ್ಥಳೀಯ ಜ್ಞಾನವನ್ನು ಕೇಳಿ ತಿಳಿದು ಅದರ ವಿಶೇಷತೆಗಳನ್ನು, ಕೆಲವು ಅನುಭವಗಳ ಮೂಲಕ, ರೈತರ ಮಾತುಗಳ ನಿರೂಪಣಾ ಶೈಲಿಯಲ್ಲಿಯೇ ಈ ಕೃತಿಯಲ್ಲಿರಿಸಿದ್ದಾರೆ.
ನೆನಪು ಒನಪು ಎಂಬ ಅಧ್ಯಾಯದಲ್ಲಿ, ಬಜಪೆಗೆ ವಿಮಾನ ಬಂತು, ನನ್ನ ಕಂಪ್ಯೂಟರ್ ಬಾಲಪಾಠ, ನಂಬರ್ ಫೈವ್ ಕೊಡಿಯಾಲ್ಕರ್ ಡಾಕ್ಟರ್, ಜವಳಗೆರೆಯ ದಿನಗಳು, ಹಿರಿಯಣ್ಣನಂತೆ ಇದ್ದ ಭೀಮ್ ರಾಜ್ ಇನ್ನೂ ಹಲವಾರು ಅನುಭವ ಕಥನಗಳ ಲೇಖನಗಳನ್ನು ಬರೆದಿದ್ದಾರೆ.
ವಿಭಿನ್ನ ಅನುಭವಗಳಲ್ಲಿ ಸಾಗುತ್ತಾ ಓದಿಸಿಕೊಂಡು ಹೋಗುವ ಕಟ್ಟು ಕಾಡಿನ ಕಥೆಗಳು, ನರಿ ಮರಿಯನ್ನು ತಂದು ಬೈಸಿಕೊಂಡೆ !, ಹುಲಿಗಳಿಲ್ಲಿದ ಲೋಕದಲ್ಲಿ, ಚಾರಣಿಗರೇ ಆನೆಗಳಿಗೆ ಮರ್ಯಾದೆ ಕೊಡಿ, ಕಾಡೊಳಗೆ ಪುಸ್ತಕ ತೆರೆದರೆ ಕಾಡೇ ತೆರೆದುಕೊಂಡಿತು ಹೀಗೆ ಕುತೂಹಲಕಾರೀ ಲೇಖನಗಳು ಇಲ್ಲಿ ಅಪರೂಪವಾಗಿದೆ.
ಕೃಷಿ ಖುಷಿ ಎಂಬ ಅಧ್ಯಾಯದಲ್ಲಿ ಕಾಫಿ ಕಲ್ಚರ್, ಕಾಫಿಯನ್ನು ಕಬಳಿಸುತ್ತಿರುವ ಕಾಯಿಕೊರಕ ಹುಳ, ಅಡಿಕೆ ಸಂಸ್ಕೃತಿ, ಬೇಸಾಯ ಬದುಕು, ಅಪ್ಪೆ ಮಾವಿನ ಮರದ ಹಿಂದೆ, ಎಂಬ ಬರಹಗಳು ಕೃಷಿ, ತೋಟಗಾರಿಕೆಯ ಬಗೆಗಿನ ಆಸಕ್ತಿಯನ್ನು ಹೆಚ್ಚಿಸುವಂತದ್ದು.
©2024 Book Brahma Private Limited.