ಕೃಷಿ ಪದ್ಧತಿಯು ಮಾಯಾಜಾಲವಾಗಿ ಪರಿವರ್ತನೆಗೊಂಡು ರೈತಾಪಿ ಬದುಕಿನ ದಿಕ್ಕು ತಪ್ಪಿಸಿದೆ. ಭೂಮಿಯು ಜೈವಿಕ ಸತ್ವವನ್ನು ಕಳೆದುಕೊಂಡು ವ್ಯವಸಾಯಕ್ಕೆ ಅಯೋಗ್ಯವಾಗಿದೆ. ರಾಸಾಯನಿಕ ಗೊಬ್ಬರವಿಲ್ಲದೇ ಏನೂ ಬೆಳೆಯಲಾರದ ಸ್ಥಿತಿಗೆ ತಲುಪಿದೆ. ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡ ರೈತನ ಸ್ಥಿತಿ ಇಂದು ಅತಂತ್ರವಾಗಿದೆ. ರೈತರು ಈ ವಾತಾವರಣದಲ್ಲಿ ತನ್ನನ್ನು ಬಂಡವಾಳಶಾಹಿ ವ್ಯವಸ್ಥೆಗೆ ಅರ್ಪಿಸಿಕೊಂಡಿದ್ದಾರೆ. ರಸಗೊಬ್ಬರ, ಕೀಟನಾಶಕ, ಕೃಷಿ ಉಪಕರಣ ಇತ್ಯಾದಿಗಳನ್ನು ತಯಾರು ಮಾಡುವ ಹಾಗೂ ವ್ಯಾಪಾರಿಗಳ ಮುಷ್ಟಿಯಲ್ಲಿ ಬಂದಿಯಾಗಿದ್ದಾನೆ. ಇಂದು ದೇಶದಲ್ಲಿ ಎಲ್ಲಿ ಏನು ತೊಂದರೆಯಾದರೂ ಪಟ್ಟು ಬೀಳುವುದು ರೈತನಿಗೆ, ಇಂಥ ಸಂದಿನ ಸಂದರ್ಭದಲ್ಲಿ ರೈತ ಪಾರಂಪರಿಕ ಕೃಷಿಯತ್ತ ಮುಖವಾಡುವುದೊಳಿತು. ಸಹಜ ಸಾವಯವ ಕೃಷಿಯ ಮೂಲಕ ರೋಗ ರುಜಿನಗಳಿಂದ ಮುಕ್ತರಾಗುವುದು ಇಂದಿನ ಅತ್ಯವಶ್ಯಕಗಳಲ್ಲಿ ಒಂದು. ಈ ಹಿನ್ನೆನಲೆಯಲ್ಲಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ವಿಭಾಗವು ಹಾಸನದಲ್ಲಿ ಏರ್ಪಡಿಸಿದ್ದ ’ಕೃಷಿ ಪಾರಂಪರಿಕ ಜ್ಞಾನ' ಎಂಬ ವಿಷಯದ ಬಗೆಗಿನ ದೇಸಿ ಸಮ್ಮೇಳನದಲ್ಲಿ ಮಂಡಿಸಿದ ಲೇಖನಗಳನ್ನು ಈ ಪುಸ್ತಕ ಒಳಗೊಂಡಿದೆ.
©2024 Book Brahma Private Limited.