ಹನಿ ನೀರಾವರಿಯಿಂದ ಸುಸ್ಥಿರ ಕೃಷಿ ಸಾಧ್ಯ ಎನ್ನುವುದರ ಬಗ್ಗೆ ಲೇಖಕ ಕುಮಾರಸ್ವಾಮಿ, ಈಗಾಗಲೇ ಹನಿ ನೀರಾವರಿ ವ್ಯವಸ್ಥಿತ ಕೃಷಿಗೆ ದಾರಿ ಎನ್ನುವ ಕೃತಿ ರಚಿಸಿದ್ದಾರೆ. ಇದೇ ನಿಟ್ಟಿನಲ್ಲಿ ಈ ಕೃತಿಯು ಮುಂದಿನ ಭವಿಷ್ಯದ ಕೃಷಿಗೆ ಹೇಗೆ ಸಹಕಾರಿಯಾಗಿದೆ ಎಂಬುದನ್ನು ವಿವರಿಸಿದ್ದಾರೆ.
ಈ ಕೃತಿಯು ಮುಖ್ಯವಾಗಿ ನೀರಿನ ಮಿತ ಬಳಕೆ ಎಲ್ಲರ ಹೊಣೆ, ಅಂತರ್ಜಲವೆನ್ನುವ ಮಾಯಾಜಾಲ, ಜಲ ಸಾಕ್ಷಾತ್ಕಾರ- ಭೂಮಿಯಿಂದ ಜಮೀನಿಗೆ, ನೀರು ಸಾಗಾಣಿಕೆಗೆ ಕೊಳವೆ ಮಾರ್ಗ, ನೀರೆತ್ತಲು ಶಕ್ತಿಯ ಮಿತ ಬಳಕೆ ಮತ್ತು ಸೌರಶಕ್ತಿಯ ಬಳಕೆ , ಹನಿ ನೀರಾವರಿ - ಮಿತ ಬಳಕೆಗೆ ಅತ್ಯಂತ ಸೂಕ್ತ ವಿಧಾನ, ಹನಿ ನೀರಾವರಿಯ ಘಟಕಗಳು ಮತ್ತು ಕಾರ್ಯ ವಿಧಾನ, ಹನಿ ನೀರಾವರಿ ವ್ಯವಸ್ಥೆಯ ವಿನ್ಯಾಸ, ಹನಿ ನೀರಾವರಿ ವ್ಯವಸ್ಥೆಯ ನಿರ್ವಹಣೆ, ಕೃಷಿ ನಿರಂತರತೆಗೆ ಭೂ ಚೇತನ, ಪೋಷಕಾಂಶಗಳ ನಿರ್ವಹಣೆ, ಹನಿ ನೀರಾವರಿಯಲ್ಲಿ ಸಾಮಾನ್ಯ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳು, ಕರ್ನಾಟಕದಲ್ಲಿ ಹನಿ ನೀರಾವರಿಯ ಬೆಳವಣಿಗೆ ಕುರಿತು ಚರ್ಚಿಸಲಾಗಿದೆ.
©2024 Book Brahma Private Limited.