ನಾಗಭೂಷಣ ಘನಮಠದಾರ್ಯರ ಕೃಷಿ ಜ್ಞಾನ ಪ್ರದೀಪಿಕೆ-ಕೃಷಿ ವಲಯದಲ್ಲಿ ಅತ್ಯುತ್ತಮ ಗ್ರಂಥ ಎಂಬ ಖ್ಯಾತಿ ಪಡೆದಿದೆ. ವಚನ ಸಾಹಿತ್ಯ ಪಿತಾಮಹ ಫ.ಗು.ಹಳಕಟ್ಟಿ ಅವರು ಘನಮಠದಾರ್ಯರ ಕೃಷಿ ಜ್ಞಾನವನ್ನು ಸಂಪಾದಿಸಿ ಕಾಲದೊಂದಿಗೆ ತಳಕು ಹಾಕಿಕೊಂಡು ಜೀವಂತವಾಗಿರುವಂತೆ ಮಾಡಿದ್ದಾರೆ.
ನಾಗಭೂಷಣ ಅವರು ಒಕ್ಕಲುತನವನ್ನುಗಾಢವಾಗಿ ಪ್ರೀತಿಸುತ್ತಿದ್ದು, ಅವರ ಶಿಷ್ಯ ಸಿದ್ಧರಾಮಪ್ಪ ಕುನ್ನಾಳ ಅವರು ನೀಡಿದ ಸಲಹೆ ಹಾಗೂ ಮಾಹಿತಿ ಆಧರಿಸಿ, ತಾವು ಈ ಕೃತಿ ರಚಿಸಿದ್ದಾಗಿ ಫ.ಗು.ಹಳಕಟ್ಟಿ ಅವರು ಕೃತಿಯ ಪ್ರಸ್ತಾವನೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಕೃತಿಯ ಮೊದಲ ಭಾಗದಲ್ಲಿ, ಹೊಲಗಳನ್ನು ತಿದ್ದುವ ಪರಿಗಳು ಹಾಗೂ ಬೇರೆ ಬೇರೆ ಪೈರುಗಳನ್ನು ಮಾಡುವ ರೀತಿ ವಿವರಿಸಿದ್ದರೆ, 2ನೇ ಭಾಗದಲ್ಲಿ-ತೋಟಗಳನ್ನು ಮಾಡುವ ಪದ್ಧತಿಯ ವಿವರಗಳಿವೆ. ನಾಗಭೂಷಣ ಘನಮಠದಾರ್ಯ ಶಿವಯೋಗಿಗಳ ಕೃಷಿಯಲ್ಲಿಯ ಅಗಾಧ ಜ್ಞಾನದ ದ್ಯೋತಕವೇ ಈ ಕೃತಿ.
©2024 Book Brahma Private Limited.