ಕೃಷಿ ಆಚರಣೆ

Author : ಮಲ್ಲಿಕಾರ್ಜುನ ಹೊಸಪಾಳ್ಯ

Pages 144

₹ 50.00




Year of Publication: 2008
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಕೃಷಿ ಆಚರಣೆಗಳ ಹಿಂದಿರುವ ವಿವಿಧ ಸ್ವರೂಪ, ವ್ಯಾಪ್ತಿ, ವೈವಿಧ್ಯತೆಗಳನ್ನು ಲೇಖಕ ಮಲ್ಲಿಕಾರ್ಜುನ ಹೊಸಪಾಳ್ಯ ಯವರು ವಿವರಿಸಿದ್ದಾರೆ. ಈ ಕೃತಿ ಬರೀ ನಮ್ಮ ಕರ್ನಾಟಕವಲ್ಲದೆ ವಿವಿಧ ರಾಜ್ಯಗಳ ಹಳ್ಳಿಗಾಡುಗಳಲ್ಲಿ ಓದುಗರನ್ನು ತಲುಪಿದೆ. ಗ್ರಾಮೀಣ ಜೀವನ ಕಥಾನಕದಂತೆ ಸಾಗುವ ಇದು ದೇಸಿ ನೆಲೆಗಟ್ಟಿನ ಕೃಷಿ ಬದುಕುಗಳ ಸಂಭ್ರಮ ಮತ್ತು ಸಾರ್ಥಕತೆಯನ್ನು ನಮಗೆ ಅರ್ಥವನ್ನು , ಮಹತ್ವನ್ನು ತಿಳಿಯಪಡಿಸುತ್ತದೆ. ಆಧುನಿಕತೆಯ ಪರಿಣಾಮದಿಂದ ಹಳ್ಳಿಗಳನ್ನು ಮರೆತು ನಗರಗಳತ್ತ ಮುಖ ಮಾಡಿರುವ ಇವತ್ತಿನ ಪೀಳಿಗೆಯ ಪರಿಸ್ಥಿತಿಯನ್ನು ಈ ಕೃತಿ ನಮಗೆ ಸ್ಪಷ್ಟಪಡಿಸುತ್ತದೆ.

About the Author

ಮಲ್ಲಿಕಾರ್ಜುನ ಹೊಸಪಾಳ್ಯ

ಲೇಖಕ ಮಲ್ಲಿಕಾರ್ಜುನ ಹೊಸಪಾಳ್ಯ ಅವರ ಹುಟ್ಟೂರು ತುಮಕೂರು ಜಿಲ್ಲೆಯ ಹೊಸಪಾಳ್ಯ. ಮಧುಗಿರಿ, ತುಮಕೂರು, ಬೆಂಗಳೂರು ಮತ್ತು ಮೈಸೂರಿನಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ ಅವರು ಅರ್ಥಶಾಸ್ತ್ರ ಹಾಗೂ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯಲ್ಲಿ ಮೊದಲ ರ್ಯಾಂಕ್ ನೊಂದಿಗೆ ಎರಡು ಚಿನ್ನದ ಪದಕ ಮತ್ತು ಪದವಿಯಲ್ಲಿ ಕನ್ನಡ ವಿಷಯದಲ್ಲಿ ಹೆಚ್ಚಿನ ಅಂಕಗಳಿಕೆಗಾಗಿ ಚಿನ್ನದ ಪದಕ ಪಡೆದಿದ್ದಾರೆ.  ದೇಸಿ ತಳಿ, ನಾಟಿ ಬೀಜಗಳ ಸಂರಕ್ಷಣೆ ಕುರಿತು ವಿಶೇಷ ಆಸಕ್ತಿ, ಜಲಸಂರಕ್ಷಣೆ, ಸುಸ್ಥಿರ ಕೃಷಿ, ಸಿರಿಧಾನ್ಯ ಚಟುವಟಿಕೆಗಳಿಗೆ ಬೆಂಬಲ. ಜಲಜಾಗೃತಿಗಾಗಿ ಕಾರ್ಯಕ್ರಮ ಸಂಘಟನೆ. ಪಾರಂಪರಿಕ ...

READ MORE

Related Books