ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಜನಜಾಗೃತಿ ಮೂಡಿಸಲೆಂದು 1986ರ ಅಕ್ಟೋಬರ್‌ನಲ್ಲಿ ಕೇರಳದಿಂದ ಗುಜರಾತಿನವರೆಗೆ ಪಾದಯಾತ್ರೆ ನಡೆಯಿತು. ಅನೇಕ ಪರಿಸರ ಚಳವಳಿಗಳಿಗೆ ಪ್ರೇರಣೆಯಾದ ಪಾದಯಾತ್ರೆ ಅದು. ಕರ್ನಾಟಕದಲ್ಲಿ ಅನೇಕ ಹೋರಾಟಗಾರರು ಹುಟ್ಟಲು ಆ ಯಾತ್ರೆಯೇ ಸ್ಫೂರ್ತಿಯಾಗಿತ್ತು. ಹೀಗೆ ಕರ್ನಾಟಕ ಪರಿಸರ ಚಳವಳಿಯ ಮುಖ್ಯಘಟ್ಟವಾಗಿದ್ದ ಜಾಥಾವನ್ನು ನೆನೆದಿದ್ದಾರೆ ನಾಡಿನ ಹಿರಿಯ ಚಿಂತಕ, ಪರಿಸರ ವಿಜ್ಞಾನಗಳ ಬರಹಗಾರ ನಾಗೇಶ ಹೆಗಡೆ.
ಇದಲ್ಲದೆ ಪಶ್ಚಿಮ ಘಟ್ಟಗಳ ಮಹತ್ವವನ್ನು ಸಾರುವ ವಿವರಗಳು, ಚಿತ್ರಗಳು ಕೃತಿಯ ಇನ್ನಷ್ಟು ಧನಾತ್ಮಕ ಅಂಶಗಳು.
©2024 Book Brahma Private Limited.