‘ನೆರಳಿಗಂಟಿದ ನೆನಪು’ ಶಿವಕುಮಾರ.ಮೋ.ಕರನಂದಿ ಅವರ ಗಜಲ್ಸಂಕಲನವಾಗಿದೆ. ಸಂಕಲನದಲ್ಲಿ ನಲವತ್ತೊಂಭತ್ತು ಗಜಲ್ ಗಳಿವೆ. ಮನ-ಮನಗಳ ನಡುವಿನ ಕಸಿವಿಸಿ ಇಲ್ಲಿಯ ಕಾವ್ಯದ ಧಾತು. ಪ್ರೀತಿ, ಕಾಡುವ ವಿರಹ, ಮಾತು ತಪ್ಪಿದ ಪ್ರೇಯಸಿ ಇವೆಲ್ಲ ತಾಕಲಾಟಗಳು ಇಲ್ಲಿನ ಗಜಲ್ ಗಳಾಗಿ ಅರಳಿವೆ. ಈಗೀಗ ಗಜಲ್ ಜನಪ್ರಿಯ ಕಾವ್ಯಪ್ರಕಾರ. ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಇದರ ಸುಗ್ಗಿಯೇ ನಡೆದಿದೆ. ಹೊಸ ಜನಾಂಗದ ಮನಸ್ಸನ್ನು ಸೂರೆಗೊಂಡ ಗಜಲ್ ಮುಖ್ಯವಾಗಿ ಯುವ ಮನಸ್ಸಿನ ಭಾವಲೋಕದ ಅನಾವರಣವಾಗಿದೆ.
©2025 Book Brahma Private Limited.