ಈ ಕೃತಿಯು ನ್ಯಾಯಯುತವಲ್ಲದ ಬೌದ್ಧಿಕ ಆಸ್ತಿ ಹಕ್ಕು ನೀತಿಗಳ ವಿರುದ್ಧ, ಜೈವಿಕಚೌರ್ಯದ ವಿರುದ್ಧ ಹಾಗೂ ಜೈವಿಕ ಸಂಪನ್ಮೂಲಗಳ ಮತ್ತು ಸಂಬಂಧಿತ ಸಾಂಪ್ರದಾಯಕ ಜ್ಞಾನದ ಖಾಸಗಿ ಏಕಸ್ವಾಮ್ಯವನ್ನು ವಿರೋಧಿಸುತ್ತದೆ. ಇಲ್ಲಿರುವ ಪ್ರಶ್ನೆ ‘ಅಂತರಾಷ್ಟ್ರೀಯ ಬೌದ್ಧಿಕ ಆಸ್ತಿ ಹಕ್ಕುಗಳ ನೀತಿಯನ್ನು ಇಲ್ಲಿ ಯಶಸ್ವಿಯಾಗಿ ಅಳವಡಿಸುವುದು ಹೇಗೆ? ಎನ್ನುವುದಲ್ಲ ಬದಲಿಗೆ, ‘ಸುಸ್ಥಿರ ಅಭಿವೃದ್ಧಿಗೆ ಬೌದ್ಧಿಕ ಆಸ್ತಿ ಹಕ್ಕುಗಳು ಪೂರಕವಾಗಬಲ್ಲವೆ?’ ಎಂಬುದು. ಇಲ್ಲಿ ಸುಸ್ಥಿರ ಅಭಿವೃದ್ಧಿ ಎಂದರೆ, ಜೈವಿಕ ವೈವಿಧ್ಯತೆ ಮತ್ತು ಸಂಬಂಧಿತ ಸಾಂಪ್ರದಾಯಕ ಜ್ಞಾನಗಳ ಸಂರಕ್ಷಣೆ, ಜೈವಿಕ ವೈವಿಧ್ಯತೆಯ ಸುಸ್ಥಿರ ಬಳಕೆ ಹಾಗೂ ಈ ಜೈವಿಕ ವೈವಿಧ್ಯತೆಯ ಮೇಲೆ ಅವಲಂಬಿತವಾಗಿರುವ ಸಮುದಾಯಗಳ ಜೀವನಾಧಾರ ಪೋಷಣೆ ಮತ್ತು ಎಲ್ಲ ಸಮುದಾಯಗಳ ಸಮಾನ ಅಭಿವೃದ್ಧಿ. ಭಾರತದ ಬೌದ್ಧಿಕ ಆಸ್ತಿ ಹಕ್ಕು ವ್ಯವಸ್ಥೆಯು ಅಂತರರಾಷ್ಟ್ರೀಯ ಬೌದ್ಧಿಕ ಆಸ್ತಿ ಹಕ್ಕುಗಳ ವ್ಯವಸ್ಥೆಯೊಂದಿಗೆ ನೇರ ಸಂಪರ್ಕಹೊಂದಿದ್ದು, ಅಂತರರಾಷ್ಟ್ರೀಯ ಬೌದ್ಧಿಕ ಆಸ್ತಿ ಹಕ್ಕುಗಳ ವ್ಯವಸ್ಥೆಯು ಇನ್ನೂ ಸಂಪೂರ್ಣವಾಗಿ ರೂಪುಗೊಳ್ಳದೇ ಇರುವುದರಿಂದ ಭಾರತವು ಕ್ಷಿಪ್ರ ಅಂತರರಾಷ್ಟ್ರೀಯ ಬೆಳವಣಿಗೆಗಳೊಂದಿಗೆ ಹೇಗೆ ತನ್ನನ್ನು ಗುರುತಿಸಿಕೊಳ್ಳುತ್ತದೆ ಎನ್ನುವುದು ಸ್ಥಳೀಯ ಶಾಸನ ಮತ್ತು ತಳಮಟ್ಟದ ವಿಧಾನಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಈ ಎಲ್ಲ ಪ್ರಶ್ನೆ, ಸಂದೇಹಗಳಿಗೆ ಈ ಕೃತಿಯಲ್ಲಿ ಉತ್ತರ ದೊರಕಿಸಿಕೊಡಲು ಪ್ರಯತ್ನಿಸಲಾಗಿದೆ.
©2024 Book Brahma Private Limited.