ಮಾನವ ಸಂಸ್ಕೃತಿ ಹಾಗೂ ನಾಗರಿಕತೆಗಳ ಮೂಲ ಸೆಲೆಯಾಗಿರುವ ಕೃಷಿ, ರೈತನಿಗೆ ಜೀವನೋಪಾಯದ ವಿಧಾನವಷ್ಟೇ ಆಗಿರದೇ, ದಿನನಿತ್ಯದ ಸಾಂಸ್ಕೃತಿಕ ಜೀವನದ ವಿಧಾನವಾಗಿತ್ತು. ಜಾಗತೀಕರಣದಿಂದಾಗಿ ಇಂದು ಕೃಷಿಯ ರೂಪುರೇಷೆಗಳಲ್ಲಿ ಮಹತ್ತರ ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಈ ಕೃತಿಯು ಕೃಷಿವಿಜ್ಞಾನ ಸಾಹಿತ್ಯದ ಕುರಿತು ಅರಿವು ಮೂಡಿಸುತ್ತದೆ. ಕೃಷಿವಿಜ್ಞಾನ ಸಾಹಿತ್ಯದ ಅವಲೋಕನ ಕೃಷಿ ಎಂಬ ಸಂಸ್ಕೃತಿಯ ಚಲನೆಯ ಪರಾಮರ್ಶೆ ಈ ಕೃತಿಯಲ್ಲಿದೆ.
©2024 Book Brahma Private Limited.