ಕೋತಿ ಮತ್ತು ಗೋಧಿ ಹುಗ್ಗಿ

Author : ರಾಜಾ ಎಂ.ಬಿ

Pages 132

₹ 130.00




Year of Publication: 2022
Published by: ವಿಶ್ವಖುಷಿ ಪ್ರಕಾಶನ
Address: ವಿಶ್ವ ನಿಲಯ, # D1 - 20, ಸೆಕ್ಟರ್‌ ನಂ. 16, ನವನಗರ, ಬಾಗಲಕೋಟೆ-587103\n\n
Phone: 9686605563

Synopsys

ಮಕ್ಕಳಿಗೆ ಕ್ಲಿಷ್ಟವಲ್ಲದ, ಯಾವ ಪ್ರದೇಶದ ಮಕ್ಕಳಾದರೂ ಸುಲಭವಾಗಿ ಓದಿ ಅರ್ಥ ಮಾಡಿಕೊಳ್ಳಬಲ್ಲ ಸರಳ ಭಾಷೆಯ ಶೈಲಿಯೊಂದನ್ನು ರಾಜಾ ಅವರು ಪಳಗಿಸಿಕೊಂಡು ಸಾರ್ಥಕವಾಗಿ ದುಡಿಸಿಕೊಂಡಿದ್ದಾರೆ. ಪದ ಬಳಕೆಯಲ್ಲಿಯೂ ಒಂದು ಹದವಿದೆ. ಪ್ರಾಸ, ಲಯಗಳ ಮೆರಗೂ ಸಹಜವಾಗಿ ಒದಗಿಬಂದಿರುವುದರಿಂದ ಈ ಪುಸ್ತಕದ ರಚನೆಗಳು ನಮ್ಮ ಮಕ್ಕಳ ಮನಗೆಲ್ಲುವುದರಲ್ಲಿ ಅನುಮಾನವಿಲ್ಲ. ಮಕ್ಕಳು ಮಾತ್ರವಲ್ಲ, ದೊಡ್ಡವರೂ ಓದಿ ಮಕ್ಕಳ ಭಾವಲೋಕದೊಳಗೆ ಇಣುಕಿ ಬರುವಂತೆ ಪ್ರೇರೇಪಿಸಬಲ್ಲ ಗುಣ ಇಲ್ಲಿನ ಕವಿತೆಗಳಿಗಿದೆ. ಹಾಗೆ ನೋಡಿದರೆ ದೊಡ್ಡವರೇ ಇಂತಹ ಪುಸ್ತಕಗಳನ್ನು ಮೊದಲು ಓದಬೇಕು. ಅವರು ಓದಿದರೆ ತಾನೆ ಮಕ್ಕಳಿಗೆ ಇಂತಹ ಪುಸ್ತಕವನ್ನು ಈ ಕಾರಣಕ್ಕೆ ಓದು ಎಂದು ತಮ್ಮ ಮಕ್ಕಳಿಗೆ ಹೇಳುವುದು! ದೊಡ್ಡವರು ಓದದಿದ್ದರೆ ಮಕ್ಕಳು ಖಂಡಿತಾ ಓದುವುದಿಲ್ಲ. ನಾವು ಓದದೆ ಮಕ್ಕಳು ಓದರೆಂದು ದೂರುವುದು ಎಷ್ಟು ಸರಿ? ರಾಜಾ ಅವರ ಈ ಕೃತಿಯನ್ನು ದೊಡ್ಡವರು-ಚಿಕ್ಕವರು ಎಲ್ಲರೂ ಓದಲಿ. ಈ ಕೃತಿಗೆ ನಮ್ಮ ನಾಡ ಮಕ್ಕಳ ಮನದಲ್ಲಿ ಜಾಗ ಪಡೆಯುವ ಶಕ್ತಿ ಖಂಡಿತ ಇದೆ. ಇಂಥ ಇನ್ನಷ್ಟು ಕೃತಿಗಳನ್ನು ರಾಜಾ ಅವರು ನೀಡುವ ಮೂಲಕ ಕನ್ನಡದಲ್ಲಿ ಮಕ್ಕಳ ಸಾಹಿತ್ಯಕ್ಕಿರುವ ಬಹುದೊಡ್ಡ ಪರಂಪರೆಯನ್ನು ಮುಂದುವರೆಸುವ ಶಕ್ತಿ ರಾಜಾ ಅವರಂತಹ ಹೊಸ ತಲೆಮಾರಿನ ಲೇಖಕರಿಗೆ ಪ್ರಾಪ್ತವಾಗಲಿ. ಎಚ್.ಎಸ್. ಸತ್ಯನಾರಾಯಣ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ರಾಜಾ ಎಂ.ಬಿ

ಹಾವೇರಿ ಜಿಲ್ಲೆ, ಸವಣೂರು ತಾಲೂಕಿನ ಕುರುಬರ ಮಲ್ಲೂರು ಗ್ರಾಮದ ರಾಜಾ ಎಂ.ಬಿ ಯವರು ವೃತ್ತಿಯಿಂದ ಸರಕಾರಿ ಪ್ರೌಢಶಾಲಾ ಶಿಕ್ಷಕರು. ಮೂಲತಃ ಇಂಗ್ಲಿಷ್ ಭಾಷಾ ಶಿಕ್ಷಕರು. ಆದರೂ ಕನ್ನಡ ಭಾಷೆ, ಸಾಹಿತ್ಯದ ಬಗ್ಗೆ ವಿಶೇಷ ಒಲವು ಹೊಂದಿದವರು. ಕನ್ನಡದಲ್ಲಿ ಬಹಳಷ್ಟು ಕವಿತೆಗಳನ್ನು, ಕತೆಗಳನ್ನು ಬರೆದಿದ್ದಾರೆ. ಹಲವಾರು ಗೀತೆಗಳಿಗೆ ಸಾಹಿತ್ಯವನ್ನು ರಚಿಸಿದ್ದಾರೆ. ತರಂಗ, ಸಂಕಥನ, ಶಿಕ್ಷಣ ವಾರ್ತೆ ಇತ್ಯಾದಿ ಪತ್ರಿಕೆಗಳಲ್ಲಿ ಇವರ ಪ್ರಬಂಧ, ಕವಿತೆಗಳು ಪ್ರಕಟಗೊಂಡಿವೆ. ಕೃತಿಗಳು: ಕೋತಿ ಮತ್ತು ಗೋಧಿ ಹುಗ್ಗಿ ...

READ MORE

Related Books