ಗರೀಬನ ಜೋಳಿಗೆ

Author : ನಾಗೇಶ್ ಜೆ. ನಾಯಕ

Pages 108

₹ 125.00




Year of Publication: 2020
Published by: ತೇಜಸ್ವಿ ಪ್ರಕಾಶನ
Address: ಅವ್ವ ಶಿವಬಸವ ನಗರ, ರಾಮಾಪೂರ ಸೈಟ್, ಸವದತ್ತಿ, ಬೆಳಗಾವಿ ಜಿಲ್ಲೆ- 591126

Synopsys

‘ಗರೀಬನ ಜೋಳಿಗೆ’ ಲೇಖಕ ನಾಗೇಶ್ ಜೆ. ನಾಯಕ ಅವರ ಮೊದಲ ಗಜಲ್ ಸಂಕಲನ. ಕವಿ ಅಲ್ಲಾಗಿರಿರಾಜ್ ಕನಕಗಿರಿ ಅವರು ಮುನ್ನುಡಿ ಬರೆದ್ದು ‘ ಸರಳತೆಯ ಭಾವನೆಗಳನ್ನು ಗಜಲ್ ಮಾಡಿರುವ ನಾಗೇಶ್ ನಾಯಕ್, ಬದುಕಿನ ಅನುಭವದ ಜೊತೆಜೊತೆಯಲ್ಲಿ ಲೋಕದ ಅನುಭವಗಳನ್ನು ತಳುಕು ಹಾಕಿಕೊಂಡು ಕಾವ್ಯ ಕಟ್ಟುವ ಧಾಟಿ ಇಷ್ಟವಾಗುತ್ತದೆ.  ಇಲ್ಲಿಯ ಗಜಲ್ ಗಳಲ್ಲಿ ಜೀವ ಪ್ರೀತಿಯ ಕವಿ ಮನಸು ತುಂಬಾ ತೂಕವಾದದ್ದು ಎಂದು ಹೇಳುತ್ತಾ, ನಾಗೇಶ್ ನಾಯಕ್ ಅವರು ಕೆಲವು ಗಂಭೀರತೆಯಿಂದ ಹೊರಬಂದು ಗ್ರಾಮ ಭಾಷೆಯ ಸಂಭಾಷಣೆಯಲ್ಲಿ ಗಜಲ್ ರಚಿಸಿದ್ದೇ ಆದರೆ ಖಂಡಿತ ಕನ್ನಡ ಗಜಲ್ ಉಸ್ತಾದರ ಸಾಲಿನಲ್ಲಿ ಸೇರಬಲ್ಲರು’ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಸಂಕಲನದಲ್ಲಿ ಒಟ್ಟು 70 ಗಜಲ್ ಗಳಿವೆ.

About the Author

ನಾಗೇಶ್ ಜೆ. ನಾಯಕ
(23 February 1975)

ನಾಗೇಶ್ ಜೆ. ನಾಯಕ ವೃತ್ತಿಯಲ್ಲಿ ಶಿಕ್ಷಕರು. 1975 ಫೆಬ್ರವರಿ 23 ರಂದು ಸವದತ್ತಿಯಲ್ಲಿ ಜನಿಸಿದರು. ಕನ್ನಡ ದಿನಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನೀನೊಂದು ಮುಗಿಯದ ಸಂಭ್ರಮ, ಪ್ರೀತಿಯಿಂದ ಪ್ರೀತಿಗೆ, ಭರವಸೆಗಳ ಬೆನ್ನೇರಿ, ಪುಟ್ಟ ಪದ್ಯಗಳು, ಕವಿ ಸಮಯ  ಮಠದೊಳಗಣ ಬೆಕ್ಕು’ ಮುಂತಾದ ಕೃತಿಗಳು ಪ್ರಕಟಣೆಗೊಂಡಿವೆ. ಬಯಲ ಕನ್ನಡಿ-ವಿಮರ್ಶಾ ಸಂಕಲನ, ಒಡಲ ದನಿ-ಅಂಕಣ ಬರಹಗಳು, ಘನದ ಕುರುಹು-ವ್ಯಕ್ತಿ ಚಿತ್ರಣ, ಚಿನ್ನದ ಚೂರಿ-ಕಥಾ ಸಂಕಲನ ಅವರ ಇತ್ತಿಚಿನ ಕೃತಿಗಳಾಗಿವೆ. ಇವರ ಸಾಹಿತ್ಯ ರಚನೆಗಾಗಿ ಸಂಕ್ರಮಣ ಸಾಹಿತ್ಯ ಪ್ರಶಸ್ತಿ, ಸಂಚಯ ಕಾವ್ಯ ಪುರಸ್ಕಾರ, ಆಜೂರು ಪುಸ್ತಕ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ...

READ MORE

Related Books