ಚಿಣ್ಣರ ಲೋಕವ ತೆರೆಯೋಣ

Author : ಚೆನ್ನವೀರ ಕಣವಿ

Pages 96

₹ 45.00




Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪಿಕರ್ ರಸ್ತೆ, ಹುಬ್ಬಳ್ಳಿ-580020.

Synopsys

‘ಚಿಣ್ಣರ ಲೋಕವ ತೆರೆಯೋಣ’ ಎಂಬುದು ಮಕ್ಕಳ ಕವನ ಸಂಕಲನ. ಸಾಹಿತಿ ಚೆನ್ನವೀರ ಕಣವಿ ರಚಿಸಿದ್ದಾರೆ. ನಮ್ಮ ಹಿರಿಯ ಕವಿಗಳು ಹಿರಿಯರಿಗಲ್ಲದೆ ಕಿರಿಯರಿಗೂ ತಿಳಿಯುವಂತೆ ಪದ್ಯ ಬರೆದಿದ್ದಾರೆ. ಇದು ಮಕ್ಕಳ ಕಾವ್ಯದ ಘನತೆಯನ್ನು ಪರೋಕ್ಷವಾಗಿ ಹೆಚ್ಚಿಸಬಲ್ಲದು. ಕುವೆಂಪು, ಬೇಂದ್ರೆ, ರಾಜರತ್ನಂ ಅವರ ಈ ಪರಂಪರೆಯನ್ನು ಸಮರ್ಥವಾಗಿ ಮುಂದುವರಿಸಿದ ನಂತರದ ತಲೆಮಾರಿನ ಹಿರಿಯರಲ್ಲಿ ಚೆನ್ನವೀರ ಕಣವಿಯವರು ಮುಖ್ಯರು. ನಮ್ಮ ತಲೆಮಾರಿನೊಂದಿಗೆ ನವೋದಯದ ತಲೆಮಾರನ್ನು ಸಂಬಂಧಿಸಿ ಸಂಪನ್ನವಾದ ಒಂದು ಸಂಸೃತಿಯ ಹರಿವನ್ನು ಹರಿಗಡಿಯದಂತೆ ನೋಡಿಕೊಳ್ಳುವ ಮೂಲಕ ನಮಗೆಲ್ಲ ಕಣವಿಯವರು ಒಂದು ಆದರ್ಶವಾಗಿ ಪರಿಣಮಿಸಿದ್ದಾರೆ. ಕಣವಿಯವರ ಮಕ್ಕಳ ಕವಿತೆಗಳಲ್ಲಿ ಕಾಣುವ ಸಹಜವೂ ಸರಳವೂ ಆದ ಭಾಷೆಯ ಬಳಕೆ, ಸುಲಲಿತವಾದ ಲಯದ ವಿನ್ಯಾಸ, ಸೃಷ್ಟಿಯ ಚರಾಚರಗಳಲ್ಲೆಲ್ಲ ಚೈತನ್ಯದ ಜೀವದಾಟವನ್ನು ಕಾಣಿಸುವ ಮಧುರವಾದ ಕಲ್ಪನಾಶೀಲತೆ ಅಪರೂಪದ್ದು. ಮಕ್ಕಳ ಬೆನ್ನ ಮೇಲೆ ಶಾಲೆಯ ಚೀಲದಂತೆ ಭಾರವಾಗಿ ಕೂಡದೆ ಅವರ ಹೆಗಲ ಮೇಲೆ ಹಗುರವಾಗಿ ಕೂತು ಚಿಲಿಪಿಲಿಸುವ ಈ ಕವಿತೆಗಳು, ಮಕ್ಕಳಿಗೆ ಬಣ್ಣದ ಹಕ್ಕಿಗಳಂತೆ ಅಪ್ಯಾಯಮಾನವಾಗುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ’ ಎಂದು ಪುಸ್ತಕದ ಬೆನ್ನುಡಿಯಲ್ಲಿ ವಿವರಿಸಲಾಗಿದೆ.

 

About the Author

ಚೆನ್ನವೀರ ಕಣವಿ
(28 June 1928)

‘ಸಮನ್ವಯ ಕವಿ’ ಎಂದು ಗುರುತಿಸಲಾಗುವ ಚೆನ್ನವೀರ ಕಣವಿ ಅವರು ನವೋದಯ ಮತ್ತು ನವ್ಯ ಸಾಹಿತ್ಯಗಳೆರಡರಲ್ಲಿಯೂ ಸಕ್ರಿಯವಾಗಿ ಪಾಲುಗೊಂಡವರು. ಧಾರವಾಡ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 1928ರ ಜೂನ್ 28ರಂದು ಜನಿಸಿದರು. ತಂದೆ ಸಕ್ರಪ್ಪ- ತಾಯಿ ಪಾರ್ವತವ್ವ. ಶಿರುಂಡ, ಗರಗಗಳಲ್ಲಿ ಪ್ರಾಥಮಿಕ ಅಭ್ಯಾಸ ಮುಗಿಸಿದ ಮೇಲೆ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ೧೯೫0ರಲ್ಲಿ ಬಿ.ಎ. ಪದವಿ (1950), ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ.ಪದವಿ (1952) ಗಳಿಸಿದರು. ಕರ್ನಾಟಕದ ವಿಶ್ವವಿದ್ಯಾನಿಲಯದ ಪ್ರಸಾರಾಂಗದಲ್ಲಿ ಕಾರ್ಯದರ್ಶಿ (1952) ಯಾಗಿ ಸೇವೆ ಪ್ರಾರಂಭಿಸಿದ ಕಣವಿ ಅವರು ಅನಂತರ 1958ರಲ್ಲಿ ಅದರ ನಿರ್ದೇಶಕರಾದರು. ಹಲವಾರು ಪ್ರಶಸ್ತಿಗಳು ಕಣವಿ ಅವರ ಸಾಹಿತ್ಯ ...

READ MORE

Related Books