About the Author

ನೀರಿನ ಗಾಂಧಿ ಎಂದೇ ಖ್ಯಾತಿಯ ಲೇಖಕ ಅಯ್ಯಪ್ಪ ಮಸಗಿ ಅವರು ಮೂಲತಃ ಗದಗ ಜಿಲ್ಲೆಯ ನಾಗರಾಳ ಗ್ರಾಮದವರು. ನೀರು ಸಾಕ್ಷರತಾ ಪ್ರತಿಷ್ಠಾನ ಸ್ಥಾಪಕ ಅಧ್ಯಕ್ಷರು. ಭಾರತದಾದ್ಯಂತ ವಿವಿಧ ಗ್ರಾಮಗಳಲ್ಲಿ ನೀರಿನ ಸಂರಕ್ಷಣೆ ಕುರಿತು ಮಾಹಿತಿ ನೀಡಿ ಮರುಭೂಮಿಯಂತಹ ಪ್ರದೇಶದಲ್ಲಿ ನೀರಿನ ಅಭಾವ ನೀಗಿಸಿದ್ದಾರೆ. ಸುಮಾರು 200 ೨೦೦ ಕೋಟಿ ರೂ. ಮೌಲ್ಯದಷ್ಟು ಯೋಜನೆಗಳನ್ನು ಪೂರ್ಣಗೊಳಿಸಿ, 6777 ಕೋಟಿ ಲೀಟರ್ ನೀರನ್ನು ಇಂಗಿಸಿ, ಅದರಿಂದ 40,000 ದಷ್ಟು ಗಿಡಮರಗಳನ್ನು ಬೆಳೆಸಿದ ಕೀರ್ತಿ ಇವರಿಗಿದೆ. ಭಾರತದಲ್ಲಿ ಅತಿ ಹೆಚ್ಚು ಕೆರೆಗಳ ನಿರ್ಮಾಣ ಮತ್ತು ಕೊಳವೆ ಬಾವಿ ಮರುಪೂರಣ ದಾಖಲೆಗಾಗಿ 2012 ರಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಯೂನೀಕ್ ವಲ್ಡ್ ರೆಕಾರ್ಡ್ಸ್ ಪುಸ್ತಕಗಳಲ್ಲಿ ನಮೂದಾಗಿದೆ.

ಕೃತಿಗಳು: ನೆಲ-ಜಲ-ಜನ, ಭಗೀರಥ: ನೀರಿನ ಸಮಸ್ಯೆ ವಿರುದ್ಧ ಸಮರ ಇತ್ಯಾದಿ

ಅಯ್ಯಪ್ಪ ಮಸಗಿ

(01 Jun 1957)