ಎನ್. ಹುಚ್ಚಪ್ಪ ಮಾಸ್ತರ್ ಅವರ ಅಭಿನಂದನಾ ಗ್ರಂಥ-ಭಾಗ-1.
ಹುಚ್ಚಪ್ಪ ಮಾಸ್ತರ್ ಮಲೆನಾಡಿನ ಭಾಗದಲಿ ದೊಡ್ಡ ಹೆಸರು. ಕರ್ನಾಟಕದ ಜಾನಪದ ಸಾಹಿತ್ಯ ಹಾಗೂ ರಂಗಭೂಮಿಯಲ್ಲಿ ಬಹುದೊಡ್ಡ ಸಾಧನೆ ಮಾಡಿರುವ ಹಿರಿಯ ವಿದ್ವಾಂಸರು, ಕರ್ನಾಟಕದ ಅಕಾಡೆಮಿಕ್ ಕ್ಷೇತ್ರದಲ್ಲಿ ಚಿರಪರಿಚಿತರು. ಗಾಯನ, ನಟನೆ, ಸಂಘಟನೆ, ಕೇತ್ರ ಕಾರ್ಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅಲ್ಲದೆ ಅವರು ಗಾಂಧಿ, ಅಂಬೇಡ್ಕರ್, ಲೋಹಿಯಾ ವಾದವನ್ನು ತಮ್ಮ ಬದುಕಿನಲಿ ಅಳವಡಿಸಿಕೊಂಡಿದ್ದಾರೆ. ಅವರಿಗೆ ಆದರ್ಶ ಮತ್ತು ವಾಸ್ತವ ಬೇರೆ ಬೇರೆಯಲ್ಲ. ಆಲೋಚಿಸಿದ್ದನ್ನು ಬದುಕಿ ಬಾಳಿದ ಅಪರೂಪದ ವ್ಯಕ್ತಿಯಾಗಿದ್ದಾರೆ. ಹಸಲ. ಹಕ್ಕಿಪಿಕ್ಕಿ, ಗೊಂಡ, ದೀವರು ಮೊದಲಾದ ಬುಡಕಟ್ಟು ಜನಾಂಗಗಳ ಬಗ್ಗೆಯೂ ಬರೆದಿದ್ದಾರೆ. ದಮನಿತರ ಪರವಾಗಿ ಹೋರಾಟ ಮಾಡಿ ಅವರಿಗೆ ಭೂಮಿ ಹಕ್ಕುಪತ್ರವನ್ನು ಕೊಡಿಸಿದ್ದಾರೆ. ವಸತಿ ಶಾಲೆಯ ಶಿಕ್ಷಕರಾಗಿದ್ದುಕೊಂಡು ಇಷ್ಟೆಲ್ಲಾ ಸಾಧಿಸಲು ಒಬ್ಬ ವ್ಯಕ್ತಿಗೆ ಸಾಧ್ಯವೇ?- ಎಂದು ನಮಗೆ ನಾವೇ ಪ್ರಶ್ನಿಸಿಕೊಳ್ಳುವುದರ ಮಟ್ಟಿಗೆ ಅವರು ಸಾಧಿಸಿ ತೋರಿಸಿದ್ದಾರೆ. ತಮ್ಮ ಬದುಕನ್ನೇ ಒಂದು ಘನವಾದ ವ್ರತದಂತೆ ಬಾಳಿ ಬದುಕಿ ತೋರಿಸಿರುವ ಹುಚ್ಚಪ್ಪ ಮಾಸ್ತರ್ರವರ ಅಭಿನಂದನಾ ಗ್ರಂಥವಿದು. ಇನ್ನೂ ಖ್ಯಾತಲೇಖಕರು, ಕವಿಗಳು ಕಂಡಂತೆ ಹುಚ್ಚಪ್ಪ ಮಾಸ್ತರರ ಬದುಕು ಬರಹವನ್ನು ಇಲ್ಲಿ ನೀಡಲಾಗಿದೆ. ಈ ಗ್ರಂಥದಲ್ಲಿ ಹುಚ್ಚಪ್ಪ ಮಾಸ್ತರರಿಗೆ -ಡಾ. ಸಿದ್ದಲಿಂಗಯ್ಯ, ಹೂವು-ಮಕರಂದ - ಡಾ. ಸಫ್ರ್ರಾಜ್ ಚಂದ್ರಗುತ್ತಿ, ಅಕ್ಕರೆಯ ಮಡಿಲು-ಹಾ.ಉಮೇಶ ಸೊರಬ , ಜಾನಪದ ಜಂಗಮ - ಎಚ್.ಬಿ. ರವೀಂದ್ರ, ಸರಿದಾರಿಯ ಸರದಾರ -ತಿರುಮಲ ಮಾವಿನಕುಳಿ, ಹುಚ್ಚಪ್ಪನವರ ಕಥನಕವನ -ಯೋಗೀಶ ಜಿ., ಜನಪದದ ತೇರ ಎಳೆದವರೇ- ಬಂದಗದ್ದೆ ರಾಧಾಕೃಷ್ಣ, ಜನಪದ ಸಂಗಮ - ಗೋಪಜಿ ನಾಗಪ, ಜಾನಪದ ಲೋಕದ ಮಹಾವೃಕ್ಷ ಹುಚ್ಚಪ್ಪ ಮಾಸ್ತರ- ರಾಮಚಂದ್ರ ಲಕ್ಷ್ಮಣನಾಯ್ಕ, ಸಾಧನೆಯ ಬದುಕು-ಸಾರ್ಥಕತೆಯತ್ತ -ಬಿ.ಎನ್.ಸಿ. ರಾವ್, ಹುಚ್ಚಪ್ಪ ಮಾಸ್ತರ - ಅಂಬಾತನಯ ಮುದ್ರಾಡಿ, ಹಿರೇಮನೆಯ ಹಿರೀಕ- ಶಶಿ ಸಂಪಳ್ಳಿ, ಛಲಗಾರ -ದಿನೇಶ್, ಕೆ ಅವರ ಲೇಖನಗಳಿವೆ.
©2024 Book Brahma Private Limited.