ಲೇಖಕ ಡಾ. ನಾಗೇಂದ್ರ ಮಸೂತಿ ಅವರ ಸಂಪಾದನಾ ಗ್ರಂಥ--ಸಾರ್ಥಕ. ಪ್ರೊ. ಎಸ್.ಎಲ್. ಪಾಟೀಲರ ಷಷ್ಠಬ್ದಿ ಅಭಿನಂದನ ಗ್ರಂಥವಿದು. ಒಟ್ಟು ನಾಲ್ಕು ಭಾಗಗಳಿದ್ದು, ಒಂದನೇ ಭಾಗದಲ್ಲಿ, ಕರ್ನಾಟಕದ ಹಿರಿಯ ತಲೆಮಾರಿನ ಸಾಹಿತಿಗಳು, ವಿದ್ವಾಂಸರು,ಸಮಾಜ ಚಿಂತಕರು, ಪಾಟೀಲರ ಬದುಕಿನ ವಿವಿಧ ಮಜಲುಗಳ ಪರಿಚಯ, ಎರಡನೇ ಭಾಗದಲ್ಲಿ, ಪಾಟೀಲರ ಸಮ ವಯಸ್ಸಿನ ಸ್ನೇಹಿತರು, ಆತ್ಮೀಯರ ಒಡನಾಟದ ಸವಿನೆನಪುಗಳ ಚಿತ್ರಣ, ಮೂರನೇ ಭಾಗದಲ್ಲಿ, ಶಿಷ್ಯರ ಹಾಗೂ ಕಿರಿಯ ತಲೆಮಾರಿನವರ ಲೇಖನಗಳಿವೆ. ನಾಲ್ಕನೆಯ ಭಾಗದಲ್ಲಿ, ಸಮಾಜ ವಿಜ್ಞಾನ, ಮನೋವಿಜ್ಞಾನ, ಶಿಕ್ಷಣ,ಆಧುನಿಕತೆ, ವಿಜ್ಞಾನ, ತಂತ್ರಜ್ಞಾನದ ಕುರಿತ ಲೇಖನಗಳನ್ನು ಸಂಗ್ರಹಿಸಲಾಗಿದೆ. ಪಾಟೀಲರ ಬದುಕಿನ ವಿವಿಧ ಮಜಲುಗಳನ್ನು ಪರಿಚಯಿಸುವ ಒಟ್ಟು 48 ಪುಟಗಳ ಚಿತ್ರಸಂಪುಟವಿದೆ.
©2025 Book Brahma Private Limited.