’ಡಾ. ಎಸ್.ಎಲ್. ಭೈರಪ್ಪನವರ ಕಾದಂಬರಿಗಳಲ್ಲಿ ಕೌಟುಂಬಿಕ ಸಮಸ್ಯೆಗಳು’ ಕೃತಿಯು ಗೌರಿ ಸುಂದರ್ ಹಾಗೂ ಪ್ರಧಾನ್ ಗುರುದತ್ತ ಅವರ ಸಂಪಾದಿತ ಅಭಿನಂದನಾ ಗ್ರಂಥವಾಗಿದೆ. ಈ ಕೃತಿಗೆ ಬೆನ್ನುಡಿ ಬರೆದಿರುವ ಪ್ರಧಾನ್ ಗುರುದತ್ತ ಅವರು, `ಭೈರಪ್ಪ ಅವರ ಕೃತಿಗಳನ್ನು ಕುರಿತಂತೆ ಹೊರ ರಾಜ್ಯಗಳ ವಿಶ್ವವಿದ್ಯಾಲಯಗಳಲ್ಲಿ ವಿಚಾರ ಸಂಕಿರಣಗಳು ನಡೆಯುತ್ತಲಿದ್ದು. ಸಂಶೋಧನಾತ್ಮಕ ಅಧ್ಯಯನಗಳು ಕೂಡಾ ಅದರ ಒಂದು ಭಾಗವಾಗಿದೆ. ಇಲ್ಲಿ ಭೈರಪ್ಪನವರ ಕಾದಂಬರಿಗಳ ಕುರಿತು ವಿಮರ್ಶೆಗಳನ್ನು ಮಾಡುವ ಲೇಖಕರು ಭೈರಪ್ಪರ ವ್ಯಕ್ತಿತ್ವದ ಕುರಿತು ಬಿಂಬಿಸಿದ್ದಾರೆ. ಕೀರ್ತಿಯನ್ನು ’ ಶನಿ’ ಎಂದೇ ಭಾವಿಸಿ , ಅದರ ಬೆನ್ನು ಹತ್ತಿ ಹೋಗದೆ ಇರುವ ಅಪೂರ್ವ ಸ್ವಭಾವದ ಲೇಖಕ ಭೈರಪ್ಪನವರಿಗೆ ಇವೆಲ್ಲಾ ಅವರ ಸಾಹಿತ್ಯ ಕಾರ್ಯದ ಮಹತ್ವದಿಂದಾಗಿ ಲಭಿಸಿರುವ ಗೌರವವಗಳು ಎಂದಿದ್ದಾರೆ. ಇಂಥ ಎಲ್ಲ ಸಂದರ್ಭಗಳಲ್ಲೂ ಅವರು ಮೆರೆಯುವ ನಿರ್ಲಿಪ್ತತೆ ಆಶ್ಚರ್ಯವನ್ನುಂಟು ಮಾಡುವಂಥದ್ದು, ಇವೆಲ್ಲವನ್ನೂ ಮೀರಿದ ’ ಕಾಲ’ ನಮ್ಮ ಸಾಧನೆಗೆ ನಿಜವಾದ ಬೆಲೆಯನ್ನು ಕಟ್ಟುತ್ತದೆ. ಅದೇ ನಿಜವಾದ ಪ್ರಶಸ್ತಿಯಾಗಿದ್ದು, ಕನ್ನಡದಲ್ಲಿ ಈ ರೀತಿಯ ನಿರ್ಲಿಪ್ತತೆಯನ್ನು ಮೆರೆದವರೆಂದರೆ ಅದು ನನಗೆ ತಿಳಿದಿರುವ ಮಟ್ಟಿಗೆ ಕುವೆಂಪು ಮತ್ತು ಶಿವರಾಮ ಕಾರಂತರು. ಭೈರಪ್ಪನವರೂ ಈ ಸಾಲಿಗೆ ಸೇರಿದವರು ಎಂದು ಹೇಳಬಹುದು. ಅವರ ಕುರಿತ ಬರವಣಿಗೆಗಳು ಮತ್ತಷ್ಟು ಸಾಹಿತ್ಯಾತ್ಮಕವಾದ ಅಭಿರುಚಿಯನ್ನು ಓದುಗರಿಗೆ ನೀಡುತ್ತದೆ ಎಂದಿದ್ದಾರೆ.
©2024 Book Brahma Private Limited.