ಜಾನಪದ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ವಿಶಿಷ್ಟ ಮಾದರಿಯ ಕೆಲಸ ಮಾಡಿದವರು ಎಂ.ಎಂ.ಪಡಶೆಟ್ಟಿ. ಇವರ ಶಿಷ್ಯ ಬಳಗ ಹಾಗೂ ಸಾಹಿತ್ಯದ ಅಭಿಮಾನಿಗಳು ಸೇರಿ ಪಡಶೆಟ್ಟಿ ಅವರ ಬದುಕು-ಬರಹದ ಕುರಿತು ರಚಿಸಿರುವ ಅಭಿನಂದನಾ ಗ್ರಂಥ ’ನಿರಾಳ’.
ಈ ಕೃತಿಯಲ್ಲಿ ಪಡಶೆಟ್ಟಿ ಅವರ ವೈಯಕ್ತಿಕ ಜೀವನದ ಕುರಿತು ’ಒಡನಾಡಿಗಳು ಕಂಡಂತೆ’, ಜಾನಪದ ಲೋಕದ ಸಂಸ್ಕೃತಿ ಪ್ರತಿನಿಧಿಸುವ ಲೇಖನಗಳು ’ಬಾಗಿಲಿಗೆ ಬಂದವರು’ ಹಾಗೂ ಅವರ ಕೃತಿಗಳ ಕುರಿತು ’ಕೃತಿಗಳ ಅವಲೋಕನ’ ಎಂಬ ಮೂರು ವಿಭಾಗಗಳಲ್ಲಿ ಪಡಶೆಟ್ಟಿ ಅವರ ಬದುಕು-ಬರಹದ ಕುರಿತು ಅವಲೋಕಿಸಲಾಗಿದೆ. ’ಬಾಗಿಲಿಗೆ ಬಂದವರು’ ಅನ್ನುವ ಶಿರ್ಷಿಕೆಯಡಿಯಲ್ಲಿ ಜಾನಪದ ಲೋಕದ ಸಂಸ್ಕೃತಿಯನ್ನು ಪ್ರತಿನಿಧಿಸುವ ಕಲಾವಿದರುಗಳ ಬದುಕಿನ ಸಮಗ್ರ ವಿವರಗಳು ದಾಖಲಾಗಿವೆ.
ಪಡಶೆಟ್ಟಿ ಅವರ ಅಭಿನಂದನ ಗ್ರಂಥವು ಅವರ ವೈಯಕ್ತಿಕ ವಿವರಗಳಿಗಿಂತಲೂ ಹೆಚ್ಚಾಗಿ ಜಾನಪದೀಯರ ಬದುಕು ಹಾಗೂ ಅವರ ಸಾಂಸ್ಕೃತಿಕ ಶ್ರೀಮಂತಿಕೆಯನ್ನೇ ಅನಾವರಣ ಮಾಡಿ ಸಂಶೋಧನಾ ಅಭ್ಯಾಸಿಗರಿಗೆ ಸಹಕಾರಿಯಾಗುವಂತಹ ಕೃತಿಯಾಗಿದೆ. ಈ ಗ್ರಂಥವನ್ನು ಶ್ರೀರಾಮ ಇಟ್ಟಣ್ಣನವರ, ಡಾ. ಚೆನ್ನಪ್ಪ ಕಟ್ಟಿ, ಮನು ಪತ್ತಾರ, ಎ.ಆರ್. ಹೆಗ್ಗನದೊಡ್ಡಿ, ಹಾಗೂ ಗುರುಳನಾಥ ಅರಳಗುಂಡಗಿ ಅವರು ಸಂಪಾದಿಸಿದ್ದಾರೆ.
©2024 Book Brahma Private Limited.