ಸದಾನಂದ ಕನಹಳ್ಳಿ ಅವರ ಕೃತಿ ‘ಮಲ್ಲಿಕಾರ್ಜುನ ಮನಸೂರ’. ಕೃತಿಯಲ್ಲಿ ಲೇಖಕರು ಬರೆದಿರುವಂತೆ ಮಲ್ಲಿಕಾರ್ಜುನ ಮನಸೂರರು, ಭಾರತೀಯ ಸಾಂಸ್ಕೃತಿಕ ನಿಧಿಯಲ್ಲಿ ಒಂದು ಅಮೂಲ್ಯ ರತ್ನವಾಗಿದ್ದರು. ಅವರು ತಮ್ಮ ಇಡೀ ಜೀವನವನ್ನು ಸಂಗೀತಸಾಧನೆಗೆ ಮುಡಿಪಿಟ್ಟಿದ್ದರು. ಅಂಶಯ, ದೊಡ್ಡ ಸಿದ್ದಿ ಪಡೆದಿದ್ದರು. ಅವರು ಎಷ್ಟೊಂದು ಉನ್ನತ ದರ್ಜೆಯ ಸ೦ಗೀತಗಾರರಾಗಿದ್ದರ೦ದರೆ, ಸಂಗೀತಗಾರರ ಸಂಗೀತಗಾರರೆಂದು ಮನ್ನದ ದೂರಕಿತ್ತು. ಅಂಧ ಕಲಾಕಾರರು ಯುಗಕ್ಕೊಮ್ಮೆ ಹಟ್ಟಿಬರುವರು. ಅವರು ಇನ್ನೂ ಜೀವಿತರಾಗಿದ್ದಾಗಲೆ ಅವರ ಚರಿತ್ರೆ ಬರೆಯಲಾರಂಭಿಸಿದ್ದೆ. ಅವರು ಇಷ್ಟು ಬೇಗ ಇಹವನ್ನು ತೊರೆಯುವರೆಂದು ಯಾರಿಗೂ ಅನಿಸಿರಲಿಲ್ಲ.ಈ ಗ್ರಂಥರಚನೆ' ಮಲ್ಲಿಕಾರ್ಜುನ ಮನಸೂರ ಅವರ ಜೀವನ ಸಾಧನೆಗಳನ್ನುಆಳವಾಗಿ ಅಭ್ಯಸಿಸುವ ಅವಕಾಶ ನೀಡಿದ. ನನಗೆ ಕಳೆದ ಮೂರು ದಶಕಗಳಿಂದಲೂ ಅವರ ನಿಕಟ ಪರಿಚಯದ ಭಾಗ್ಯ ಲಭಿಸಿತ್ತು. ಆಗಾಗ ಮಲ್ಲಿಕಾರ್ಜುನ ಮನಸೂರ ಅವರನ್ನು ಕುರಿತು ಕೆಲವು ಲೇಖನಗಳನ್ನು ಬರೆದಿದ್ದನಾದರೂ ಅವರ ಚರಿತ್ರೆ ಬರೆಯುವ ವಿಚಾರ ಸುಳಿದಿರಲಿಲ್ಲ. ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್. ರಾಮೇಗೌಡರ ಒತ್ತಾಸೆ ಇರದಿದ್ದರೆ ಅದನ್ನು ಎಂದು ಬರೆಯುತ್ತಿದ್ದನೊ, ಬರೆಯುತ್ತಿದ್ದನೋ ಇಲ್ಲವೂ ನಾ ಕಾಣೆ.ಪ್ರಸ್ತುತ ಚರಿತ್ರೆಯಲ್ಲಿ ಮಲ್ಲಿಕಾರ್ಜುನ ಮನಸೂರ ಅವರ ಸಂಕೀರ್ಣ ವ್ಯಕ್ತಿತ್ವ, ಸಂಗೀತ ಶಿಕ್ಷಣ, ಗುರಿ ಸಾಧಿಸಲು ಅವರು ಪಟ್ಟ ಕಷ್ಟ , ಪ್ರತಿಭೆ, ಅವರ ಮೇಲಾಗಿದ್ದ ಪ್ರಭಾವಗಳು, ಅವರ ಶೈಲಿಯ ವೈಶಿಷ್ಟ್ಯ, ಸ್ಥಾನಮಾನಗಳನ್ನು ಚಿತ್ರಿಸಲು ಯತ್ನಿಸಿರುವೆ. ನಿಜಕ್ಕೂ ಇದು ಸುಲಭ ಕಾರ್ಯವಾಗಿರಲಿಲ್ಲ. ಆದರೆ, ಈ ಚಿಕ್ಕದಾದರೂ ಸಮರ್ಪಕ ಚರಿತ್ರೆ ಬರೆಯುವಲ್ಲಿ ಅತ್ಯಂತ ಖುಷಿಪಟ್ಟಿದ್ದೇನೆ.ನಾಡು ನುಡಿ ಬೆಳವಣಿಗೆಯ ಅಪರಿಮಿತ ಆಸ್ಥೆ, ಪರಿಶ್ರಮವುಳ್ಳ ಚೈತನ್ಯಮೂರ್ತಿಗಳೂ, ಜ್ಞಾನದಾಸೋಹಿಗಳೂ ಆಗಿರುವ ಶೋಂಟದಾರ್ಯ ಜಗದ್ಗುರು ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳ ಹಿರಿತನದಲ್ಲಿ ಮುನ್ನಡೆಯುತ್ತಿರುವ ವೀರಶೈವ ಅಧ್ಯಯನ ಸಂಸ್ಥೆ ಪ್ರಸ್ತುತ ಕೃತಿಯನ್ನು ಪ್ರಕಟಿಸುತ್ತಿರುವುದು ಹಮ್ಮೆಯ ಸಂಗತಿ. ನನ್ನೆಲ್ಲ ಚಟುವಟಿಕೆಗಳ ಸೌಂದರ್ಯ ಪ್ರಜ್ಞೆಯಾಗಿರುವ ಮಿತ್ರ ಶ್ರೀ ಶಶಿ ಸಾಲಿ ಚಿತ್ರಗಳನ್ನು, ವಿಶಿಷ್ಟವಾದ ಮುಖಪುಟ ವಿನ್ಯಾಸವನ್ನು ಒದಗಿಸಿದ್ದಾರೆ. ಅವರಿಗೆ ನಯ ಕೃತಜ್ಞತೆಗಳು ಎಂಬುದಾಗಿ ಬರೆದಿದ್ದಾರೆ.
ಕೃತಿಯ ಪರಿವಿಡಿಯಲ್ಲಿ ಸಂಗೀತ ಲೋಕದ ಅದ್ಭುತ, ಕೌಟುಂಬಿಕ ಹಿನ್ನೆಲೆ, ಸಂಗೀತದ ಬೀಜ, ರಂಗಭೂಮಿಯ ಶಾಲೆ, ಗುರು ಶಿಷ್ಯನನ್ನರಸಿ, ಮರಳಿ ರಂಗಭೂಮಿಗೆ, ಹೆಸರು ಪಸರಿಸುತ್ತದೆ, ಜೈಪುರ ಘರಾಣಾ, ಹೊಸ ದಿಗಂತಗಳು, ಆ ನೋ ಭದ್ರಾಃ ಕ್ರತವೊಯಂತು ವಿಶ್ವತಃ, ಸಿಹಿ-ಕಹಿ ಸಂಬಂಧ, ಸುಖ ದುಃಖೆ ಚೈವ, ಎನ್ನ ಕಾಯವ ದಂಡಿಗೆಯ ಮಾಡಯ್ಯಾ, ಹೊಸ ಆಯಾಮ, ಮನಸೂರರ ಗಾಯನದ ಮಾಂತ್ರಿಕತೆ, ಮಾನ ಸಮ್ಮಾನ ಎಂಬ ಶೀರ್ಷಿಕೆಗಳಿವೆ.
©2024 Book Brahma Private Limited.