‘ನೆಲಗುಣ’ ಕೃತಿಯು ಪರಿಸರ ತಜ್ಞ -ವಿಜ್ಞಾನ ಲೇಖನಗಳ ಬರಹಗಾರ ನಾಗೇಶ ಹೆಗಡೆ ಅವರ ಕುರಿತ ಅಭಿನಂದನಾ ಗ್ರಂಥವಾಗಿದೆ. ಗುರುರಾಜ್ ಎಸ್ ದಾವಣಗೆರೆ ಅವರು ಈ ಕೃತಿಯ ಪ್ರಧಾನ ಸಂಪಾದಕರು. ನಾಗೇಶ ಹೆಗಡೆ ಅವರ 50 ಕೃತಿಗಳ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ. ಹಿರಿಯ ಸಾಹಿತಿ ಕೆ.ವಿ ಅಕ್ಷರ ಅವರು ಈ ಕೃತಿಯ ಕುರಿತು, ‘ನಾಗೇಶ ಹೆಗಡೆ ಅವರು ತಮ್ಮ ಕನ್ನಡವನ್ನು ಕಟ್ಟಿಕೊಂಡು, ಬಳಿಕ ತಮ್ಮ ಬರಹಗಳಿಂದ ಕನ್ನಡತನವನ್ನು ಕಟ್ಟಿದ್ದಾರೆ ಎನ್ನುತ್ತಾರೆ.
ಲೇಖಕಿ ವೈದೇಹಿ ಅವರು, ‘ನಾಗೇಶ ಹೆಗಡೆ ಅವರ ಬರಹಗಳು ಬರಹಕ್ಕಾಗಿ ಬರಹಗಳಲ್ಲ ಅವು, ಲೇಖಕನ ಜೀವ ನೊಂದು ಇದೀಗ ನಾನು ಮಾತಾಡದೇ ಕಳೆಯೆ ಎಂಬಂತೆ ಹೊಮ್ಮಿದ ಬರಹಗಳು’ ಎಂದು ಪ್ರಶಂಸಿಸಿದ್ದಾರೆ. ಲೇಖಕ ರಘುನಾಥ ಚ. ಹ.ಅವರು ‘ತರಾಸು, ಅನಕೃ ಅವರನ್ನು ಓದುವ ಸಂಸ್ಕೃತಿ ಬೆಳೆಸಿದವರು ಎನ್ನುತ್ತೇವೆ. ನಾಗೇಶ ಹೆಗಡೆ ಪತ್ರಿಕೆಗಳಿಗೆ ಬರೆಯುವ ಬರಹಗಾರರ ತಲೆಮಾರೊಂದನ್ನು ರೂಪಿಸಿದ ಮೇಷ್ಟ್ರು’ ಎಂದು ಶ್ಳಾಘಿಸಿದ್ದಾರೆ.
©2024 Book Brahma Private Limited.