ದಂತಿ ಅವರ ಅಭಿನಂದನಾ ಗ್ರಂಥವೊಂದನ್ನು ಪ್ರಕಟಿಸುವ ಯೋಜನೆಯನ್ನು ಅಭಿನಂದನಾ ಸಮಿತಿಯು ಹಾಕಿಕೊಂಡಿತು. ಅದಕ್ಕಾಗಿ ಸಂಪಾದಕ ಮಂಡಳಿಯನ್ನು ರಚಿಸಲಾಯಿತು. ಹಲವು ಬಾರಿ ಸಂಪಾದಕ ಮಂಡಳಿಯ ಸಭೆ ನಡೆಸಿ ಗ್ರಂಥದ ರೂಪು ರೇಷೆಯನ್ನು ರೂಪಿಸಲಾಯಿತು. ಅಭಿನಂದನಾ ಗ್ರಂಥವು ಕೇವಲ ಆಪ್ತರ, ಬಂಧುಗಳ, ಅಭಿಮಾನಿಗಳ ಅನಿಸಿಕೆಗಳನ್ನು ಮಾತ್ರ ಒಳಗೊಂಡರೆ ಸಾಲದು. ಅದು ದಂತಿ ಅವರ ಉದಾತ್ತ ಬದುಕಿನ ಪರಿಚಯ ಮಾಡಿಕೊಡಬೇಕು. ಜೊತೆಗೆ ಮೌಲ್ಯಯುತ ವಿಚಾರ ಬರಹಗಳನ್ನು ಒಳಗೊಂಡಿರಬೇಕು ಮತ್ತು ಸಂಗ್ರಹಯೋಗ್ಯವಾಗಿರಬೇಕು ಎಂಬುದು ಅಭಿನಂದನಾ ಸಮಿತಿಯ ಒತ್ತಾಸೆಯಾಗಿದ್ದಿತು. ಈ ಹಿನ್ನೆಲೆಯಲ್ಲಿ ಈ ಅಭಿನಂದನಾ ಗ್ರಂಥವು ಬುಕ್ ಬ್ರಹ್ಮ, ಇದು ದಂತ ಕಥೆಯಲ್ಲ, `ದಂತಿ ಕಥೆ' ಎಂಬ ಶೀರ್ಷಿಕೆಯಲ್ಲಿ ರೂಪುಗೊಂಡಿದೆ. ಈ ಕೃತಿಯು ಮೂರು ಭಾಗದಲ್ಲಿದೆ. ಮೊದಲ ಭಾಗದಲ್ಲಿ ದಂತಿಯವರ ಜೀವನದ ವಿವಿಧ ಮಗ್ಗುಲುಗಳನ್ನು ಪರಿಚಯಿಸುವ ʼದಂತಿ ಕಥೆʼ ಇದೆ. ಎರಡನೇ ಭಾಗದಲ್ಲಿ 'ಜಗದ ಕಥೆ' ಎಂಬ ಶೀರ್ಷಿಕೆಯಲ್ಲಿ ಹಲವು ವಿಷಯಗಳನ್ನೊಳಗೊಂಡ ಮೌಲಿಕ ಬರಹಗಳಿವೆ. 'ದಂತಿ ಸಾಂಗತ್ಯ- ಸಂಗತಿ' ಎಂಬ ಶೀರ್ಷಿಕೆಯ ಮೂರನೇ ಭಾಗದಲ್ಲಿ ದಂತಿಯವರ ಆಪ್ತರು, ಬಂಧುಗಳು, ಅವರ ಒಡನಾಟಕ್ಕೆ ಬಂದವರು ಅವರ ಮೇರು ವ್ಯಕ್ತಿತ್ವದ ಚಿತ್ರಣವನ್ನು ಮಾಡಿಕೊಟ್ಟಿದ್ದಾರೆ ಎಂದು ಗ್ರಂಥದ ಸಂಪಾದಕೀಯ ಭಾಗದಲ್ಲಿ ಕೆ.ಪ್ರಭಾಕರ ರಾವ್ ಹೇಳಿದ್ದಾರೆ.
©2025 Book Brahma Private Limited.