ಎಸ್.ಡಿ. ಶಶಿಕಲಾ ಅವರ ಅಭಿನಂದನಾ ಗ್ರಂಥ ಲೇಖಕ ವಾಸಯ್ಯ ಎನ್ ಅವರು ರಚಿಸಿದ ‘ಬೌದ್ಧಿಕ ಯಾತ್ರೆ’. ಈ ಕೃತಿಯು ಶಶಿಕಲಾ ಅವರ ಗುಣಲಕ್ಷಣವನ್ನು ಕಟ್ಟಿಕೊಡುತ್ತದೆ. ಇತ್ತೀಚಿನ ಕಾಲದ ಅಧ್ಯಾಪಕರಲ್ಲಿ ಅಧ್ಯಯನ ಅಧ್ಯಾಪನಗಳೊಡನೆ ಬರಹವೂ ಮೇಳೈಸುವುದು ಅಪರೂಪ. ಅದು ಮಹಿಳೆಯರ ಮಾತು ಬಂದಾಗ ಮತ್ತೂ ಮಹತ್ವ ಪಡೆಯುತ್ತದೆ. ಶಶಿಕಲಾ ಅವರ ಓದು ಹಾಗೂ ಬರಹದ ವ್ಯಾಪ್ತಿ ಹಿರಿದಾದದು. ಹಾಗೆಯೇ ಅವರ ವೈಚಾರಿಕತೆಯಲ್ಲಿಯೂ ಯಾವುದೇ ಮಡಿವಂತಿಕೆ ಅಥವಾ ಅನ್ಯತ್ವದ ಭಾವಗಳಿಂದ ಅತೀತವಾಗಿದ್ದು, ಆರೋಗ್ಯಕರವಾದುದಾಗಿದೆ. ಹಳಗನ್ನಡ, ನಡುಗನ್ನಡ, ಹೊಸಗನ್ನಡ ಎಂದು ಯಾವುದೇ ಒಂದು ಮಾರ್ಗಕ್ಕೆ ಸೀಮಿತವಾಗಿರದೆ ಎಲ್ಲವನ್ನು ತನ್ನದಾಗಿಸಿಕೊಳ್ಳುವ ಅವರ ಹಂಬಲ ವೇದ್ಯವಾಗುತ್ತದೆ. ಅಂತೆಯೇ ಅವರ ನಿಲುವುಗಳು ಸದಾ ಸಮಾಜ ಮುಖಿಯಾಗಿರುತ್ತವೆ ಎಂಬುದನ್ನು ನಾವು ಇಲ್ಲಿ ಕಾಣಬಹುದು.
©2024 Book Brahma Private Limited.