ಸಾಮಗಾಥೆ - ಯಕ್ಷಗಾನ ಕಲಾವಿದ ಎಂ.ಆರ್.ವಾಸುದೇವ ಸಾಮಗರ ಅವರ ಜೀವನ ಮತ್ತು ಸಾಧನೆಯ ಕುರಿತಾದ ಗೌರವಗ್ರಂಥ. ವಾಸುದೇವ ಸಾಮಗರು ಯಕ್ಷಗಾನ ಕ್ಷೇತ್ರದಲ್ಲಿ ಒಂದು ವಿಶೇಷ ಹೆಸರು, ವಿಶಿಷ್ಟ ವ್ಯಕ್ತಿತ್ವ ತಮ್ಮ ವಿದ್ವತ್ತಿನ ಕಾರಣದಿಂದ ಅಸಂಖ್ಯಾತ ಮಿತ್ರರನ್ನೂ, ನಿಷ್ಟೂರತೆಯಿಂದ ಅಸಂಖ್ಯ ಶತ್ರುಗಳನ್ನೂ ಹೊಂದಿರುವ ವಿಚಿತ್ರ ವ್ಯಕ್ತಿ. ಇವತ್ತಿಗೂ ಅವರನ್ನು ಪೂರ್ಣ ಅರ್ಥ ಮಾಡಿಕೊಳ್ಳುವುದಕ್ಕೆ ಯಾರಿಂದಲೂ ಸಾಧ್ಯವಾಗಿಲ್ಲ ಎನ್ನುತ್ತಾರೆ ಡಾ.ಟಿ. ಶ್ಯಾಮ ಭಟ್. ತನ್ನದೇ ಛಾಪು, ಶೈಲಿಗಳಿಂದ ಅನೇಕ ಪಾತ್ರಗಳಿಗೆ ಜೀವ ತುಂಬಿದ ಪ್ರತಿಭಾನ್ವಿತ ಕಲಾವಿದ ವಾಸುದೇವ ಸಾಮಗರ. ಅವರ ಎಪ್ಪತ್ತನೆಯ ವರ್ಷದ ಆಚರಣೆಯ ಸಂದರ್ಭದಲ್ಲಿ ಗೌರವಪೂರ್ಣವಾಗಿ ಅರ್ಪಿಸಿರುವ ಗ್ರಂಥ ಸಾಮಗಾಥೆ. ಯಕ್ಷಗಾನ ಲೋಕದಲ್ಲಿ ತಮ್ಮ ಹಲವಾರು ವಿಶಿಷ್ಟತೆಗಳಿಂದ, ಸಹಕಲಾವಿದರ ಸ್ಮರಣೆಯಲ್ಲೂ ನೋಡುಗ-ಕೇಳುಗರ ಸ್ಮರಣೆಯಲ್ಲೂ ಉಳಿದಿರುವವರು, ಮುಂದೆಯೂ ಉಳಿಯುವವರು ವಾಸುದೇವ ಸಾಮಗರು. ಇಂಥಾ ಕಲಾವಿದರನ್ನು ಮುಂದಿನ ತಲೆಮಾರುಗಳಿಗೆ ಪರಿಚಯಿಸುವ ಕೆಲಸ ಈ ಕೃತಿಯ ಮೂಲಕ ನಡೆದಿದೆ.
©2025 Book Brahma Private Limited.