ಖ್ಯಾತ ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜ ಅವರಿಗೆ ನುಡಿನಮನ ಸಲ್ಲಿಸಿದ ಕೃತಿ ’ನಮ್ಮ ಗಿರಡ್ಡಿ ಸsರ್’ . ಈ ಕೃತಿಯನ್ನು ಶ್ಯಾಮಸುಂದರ ಬಿದರಕುಂದಿ ಹಾಗೂ ಲಕ್ಷ್ಮೀಕಾಂತ ಇಟ್ನಾಳ ಸಂಪಾದಿಸಿದ್ದು, ಗಿರಡ್ಡಿ ಅವರ ಒಡನಾಡಿಗಳಾದ ಜಿ.ಎಸ್.ಆಮೂರ, ಚೆನ್ನವೀರ ಕಣವಿ, ಚಂದ್ರಶೇಖರ ಪಾಟೀಲ (ಚಂಪಾ), ಸಿದ್ಧಲಿಂಗ ಪಟ್ಟಣಶೆಟ್ಟಿ ಸೇರಿದಂತೆ ನಾಡಿನ ಖ್ಯಾತ ಸಾಹಿತಿ-ಚಿಂತಕರು ಬರೆದಿರುವ ಸುಮಾರು 52 ಲೇಖನಗಳಿವೆ.
ಕೊನೆಗೆ, ಗಿರಡ್ಡಿ (ಗೋವಿಂದರಾಜಪ್ಪ ಅಂದಾನಪ್ಪ ಗಿರಡ್ಡಿ) ಅವರ ಜೀವನ ವಿವರವಿದೆ. ಇಲ್ಲಿಯ ಲೇಖನಗಳು ಗಿರಡ್ಡಿ ಅವರ ವ್ಯಕ್ತಿತ್ವ-ಬರೆಹ-ಬದುಕಿನ ವಿವಿಧ ಆಯಾಮಗಳನ್ನು ಪರಿಚಯಿಸಿಕೊಡುತ್ತದೆ. ಗಿರಡ್ಡಿ ಕೇವಲ ಚಿಂತಕರಲ್ಲ; ಸಾರ್ವಜನಿಕ ಬದುಕಿನ ಸುಂದರತೆಗಾಗಿ ಅವರ ಸಾಮಾಜಿಕ ಕಳಕಳಿಯನ್ನು ಪ್ರಶಂಸಿಸಲಾಗಿದೆ. ಪ್ರತಿ ಬರೆಹವು ಗಿರಡ್ಡಿಯೊಂದಿಗಿನ ನೆನಪುಗಳನ್ನು ಬಹು ಆತ್ಮೀಯವಾಗಿ ಓದುಗರನ್ನು ತಟ್ಟುತ್ತವೆ.
©2024 Book Brahma Private Limited.