‘ವೈಭವಿ’ ಪ್ರೊ. ರಾಜಶೇಖರ ಭೂಸನೂರಮಠ (ರಾಭೂ) ಅವರಿಗೆ ಸಲ್ಲಿಸಿದ ಅಭಿನಂದನ ಗ್ರಂಥ. ಡಾ. ಸಂಗಮೇಶ ಸವದತ್ತಿಮಠ ಅವರು ಸಂಪಾದಿಸಿದ್ದಾರೆ. ಪ್ರೊ. ರಾಜಶೇಖರ ಭೂಸನೂರಮಠ ಕನ್ನಡ ವೈಜ್ಞಾನಿಕ ಕಥಾ ಸಾಹಿತ್ಯದ ಭೀಷ್ಮ ಮತ್ತು ಕನ್ನಡ ಸಾರಸ್ವತಲೋಕದ ಅದ್ಭುತ ವೈಜ್ಞಾನಿಕ ಸೃಜನಶೀಲಸಾಹಿತ್ಯದ ಮೊಟ್ಟಮೊದಲ ಸೃಷ್ಟಿಕರ್ತ ಎನ್ನಲಾಗುತ್ತಿದೆ. ಅವರ ವೈಜ್ಞಾನಿಕ ಸಾಹಿತ್ಯ ಕೃತಿಗಳೆಂದರೆ ಕುತೂಹಲದ ಕಾರಂಜಿಗಳು. ಓದುಗರ ಮನದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ವಿರಳಾತಿ ವಿರಳ ಸಾಹಿತಿಗಳಲ್ಲಿ ರಾಭೂ ಒಬ್ಬರು. ರಾಭೂ ಅವರಿಗೆ ಸರಿಗಟ್ಟುವ ವೈಜ್ಞಾನಿಕ ಸೃಜನ ಸಾಹಿತಿ ಇನ್ನೊಬ್ಬರಿಲ್ಲ. ಜನಪ್ರಿಯ ವಿಜ್ಞಾನ, ಅತೀಂದ್ರಿಯವಿಜ್ಞಾನ, ಭವಿಷ್ಯತ್ ಕಾಲದ ವಿಜ್ಞಾನ, ವೈಜ್ಞಾನಿಕ ಸಾಹಸ ಸಾಹಿತ್ಯ, ವೈಜ್ಞಾನಿಕ ಚಿಕಿತ್ಸೆ, ಶೂನ್ಯಧ್ಯಾನ, ಕಲ್ಪಧ್ಯಾನ, ಭವಿಷ್ಯಾವಧಾನ, ವೈಜ್ಞಾನಿಕ ಚಿಕಿತ್ಸೆ, ಹೀಗೆ ಹತ್ತಾರು ವೈಜ್ಞಾನಿಕ ಕ್ಷೇತ್ರಗಳಲ್ಲಿ ನಿರಂತರ ಸಾಹಿತ್ಯ ರಚಿಸಿದ ರಾಭೂ ಅವರಿಗೆ 75 ವಸಂತಗಳು ಪೂರ್ಣಗೊಳ್ಳುತ್ತಿದ್ದಂತೆ ಅವರ ಮಿತ್ರವರ್ಗ ಸಲ್ಲಿಸಿದ ಅಭಿನಂದನಾ ಗ್ರಂಥವಿದು.
©2024 Book Brahma Private Limited.