‘ನಾಡೋಜ ದೇಶಹಳ್ಳಿ ಜಿ. ನಾರಾಯಣ ಅಭಿನಂದನ ಸಂಪುಟ’ ಕೃತಿಯು ಪ್ರೊ. ಎಂ.ಎಚ್ ಕೃಷ್ಣಯ್ಯ ಹಾಗೂ ಡಾ. ಚಕ್ಕೆರೆ ಶಿವಶಂಕರ್ ಸಂಪಾದಕತ್ವದ ಕೃತಿಯಾಗಿದೆ. `ನಾಡೋಜ ದೇಶಹಳ್ಳಿ ಜಿ.ನಾರಾಯಣ ಅಭಿನಂದನ ಸಂಪುಟ'ದಲ್ಲಿ ಎರಡು ಭಾಗಗಳಿವೆ. ಒಂದು, ಅಭಿನಂದನ ಲೇಖನಗಳ ಭಾಗ, ಎರಡು ಶ್ರೀ ಜಿ.ನಾರಾಯಣ ಅವರಿಗೆ ಪ್ರಿಯವಾದ ಸಂಸ್ಕೃತಿ ಮತ್ತು ಪರಂಪರೆ ಕುರಿತ ಎಲ್ಲ ಕಾಲಕ್ಕೂ ಪರಾಮರ್ಶನಯೋಗ್ಯವಾದ ಲೇಖನಗಳ ಭಾಗ, ಎಲ್ಲವೂ ವಿವಿಧ ಮೂಲಗಳಿಂದ ಆರಿಸಿದುವು. ಮೊದಲನೆಯ ಭಾಗದಲ್ಲಿ, ಹೊಸ ಲೇಖನಗಳ ಜೊತೆಗೆ, ಹಿಂದೆ ಶ್ರೀ ಜಿ.ನಾರಾಯಣ ಅವರಿಗೆ ಅಭಿನಂದನೆ ಸಲ್ಲಿಸಿದ ಸಂದರ್ಭಗಳಲ್ಲಿ ಹೊರತಂದ ಸಂಸ್ಮರಣ ಸಂಚಿಕೆಗಳಲ್ಲಿನ ಆರಿಸಿದ ಲೇಖನಗಳನ್ನು ಸೇರಿಸಿದೆ. ಶ್ರೀ ಜಿ.ನಾರಾಯಣ ಅವರ ಕಾರ್ಯವಿಧಾನವನ್ನು ಬಹುಹತ್ತಿರದಿಂದ ಕಂಡವರು, ಕಾರ್ಯಯೋಜನೆಗಳಲ್ಲಿ ಪಾಲ್ಗೊಂಡವರು, ಸಮವಯಸ್ಕ ಒಡನಾಡಿಗಳು, ಸ್ನೇಹಿತರು, ಕವಿ ಸಾಹಿತಿಗಳು ಇವರಲ್ಲಿ ಹಲವರು ಇಂದು ನಮ್ಮೊಡನಿಲ್ಲ. ನಮ್ಮ ಪುಣ್ಯಕ್ಕೆ ಕೆಲವು ಹಿರಿಯರು ಇದ್ದು ಸಾಕ್ಷಿಪ್ರಜ್ಞೆಯಾಗಿ ನಮ್ಮ ಕಾರ್ಯಕ್ಕೆ ಶುಭ ಕೋರುತ್ತಿದ್ದಾರೆ. ಅವರೆಲ್ಲರ ಅನಿಸಿಕೆಗಳು ಹಾಗೂ ಅಭಿನಂದನೆ ಸದಾ ಸ್ಮರಣಾರ್ಹವಾದುವು. ಎರಡನೆಯದಾಗಿ, ಅವರು ಬರೆದ ಲೇಖನಗಳು ದೀರ್ಘವಾದವಲ್ಲ, ಆದರೆ ಅಂಗೈಯಲ್ಲಿನ ಸ್ಮಾರಕಗಳಂತೆ ಶ್ರೀ ಜಿ.ನಾರಾಯಣ ಅವರ ವ್ಯಕ್ತಿತ್ವ ಮತ್ತು ಸಾಧನೆಯನ್ನು ಮೂರ್ತರೂಪದಲ್ಲಿ ಕಡೆದು ನಿಲ್ಲಿಸುತ್ತವೆ. ಅವುಗಳಲ್ಲಿ ಹಿರಿಯ ಚೇತನಗಳು ತೋರಿರುವ ಪ್ರೀತಿ ಗೌರವಗಳ ತುಂಬು ಹೃದಯಸ್ಪಂದನೆಯಿದೆ, ಭಾವಸ್ಪಂದನೆಯಿದೆ.
©2024 Book Brahma Private Limited.