ಲೇಖಕ ಶ್ರೀನಿಧಿ ಡಿ.ಎಸ್,ಶ್ರೀಕಲಾ ಡಿ.ಎಸ್, ರವಿ ಮಡೋಡಿ, ಸುಧಾಕಿರಣ ಅಧಿಕಶ್ರೇಣಿ ಸಂಪಾದನೆ ಮಾಡಿರುವ ಗೌರವ ಗ್ರಂಥ ‘ಯಕ್ಷಶ್ರೀಧರ’. ಯಕ್ಷಗಾನ ಕವಿ, ವಿದ್ವಾಂಸ ಶ್ರೀಧರ ಡಿ.ಎಸ್ ಕುರಿತ ಗೌರವ ಗ್ರಂಥ ಇದಾಗಿದೆ. ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಶ್ರೀಧರ ಡಿ.ಎಸ್ ಅವರ ಕುರಿತು ನಾಡಿನ ಗಣ್ಯರು ಬರೆದಿರುವ ಲೇಖನಗಳ ಗುಚ್ಛವೇ ಈ ಕೃತಿ. ಯಕ್ಷಗಾನ ಕ್ಷೇತ್ರದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ವರುಷಗಳ ಕಾಲದಿಂದ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀಧರರು, ಪ್ರಮುಖ ಯಕ್ಷಕವಿ ಕೂಡ ಹೌದು. ನಲವತ್ತಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳ ರಚನೆ, ಮೂರು ಕಾದಂಬರಿಗಳು, ನಗೆ ಲೇಖನಗಳು, ವಿಮರ್ಶೆಗಳು : ಹೀಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಸಮಗ್ರವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀಧರ ಡಿ.ಎಸ್ ಅವರನ್ನು ಗುರುತಿಸಿ ಗೌರವಿಸುವ ನಿಟ್ಟಿನಲ್ಲಿ ಯಕ್ಷಶ್ರೀಧರ ಗ್ರಂಥವನ್ನು ಸಂಪಾದನೆ ಮಾಡಲಾಗಿದೆ.
©2025 Book Brahma Private Limited.