ಸಾವಿತ್ರಿಬಾಯಿ ಫುಲೆ ಭಾರತದ ಮೊದಲ ಶಿಕ್ಷಕಿ. 19ನೇ ಶತಮಾನದಲ್ಲಿಯೇ ಹೆಣ್ಣುಮಕ್ಕಳು, ಶೂದ್ರರಿಗೆ ಅಕ್ಷರಲೋಕದ ಹೆಬ್ಬಾಗಿಲು ತೆರೆದು ಕೊಟ್ಟದ್ದು ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರ ಹೆಗ್ಗಳಿಕೆ. ಸನಾತನಿಗಳ ವಿರೋಧದ ನಡುವೆಯೂ ತಳ ಸಮುದಾಯದ ಜನರಲ್ಲಿ ಅಕ್ಷರದ ಬೀಜ ಬಿತ್ತಿದ್ದರು. ಸಾವಿತ್ರಿಬಾಯಿ ಫುಲೆ ಅವರ ಬದುಕು ಮತ್ತು ಹೋರಾಟದ ಕುರಿತು ಈ ಕೃತಿಯಲ್ಲಿ ವಿವರಿಸಲಾಗಿದೆ. ಪುಸ್ತಕದ ಕೊನೆಯಲ್ಲಿ ಚಿತ್ರ ಸಂಪುಟವಿದೆ. ಫುಲೆ ದಂಪತಿ ಅಸ್ಪೃಶ್ಯರಿಗೆಂದು ಬಿಟ್ಟುಕೊಟ್ಟಿದ್ದ ಮನೆಯ ನೀರಿನ ತೊಟ್ಟಿಯ ಚಿತ್ರಗಳು ಓದುಗರ ಮನಸೆಳೆಯುತ್ತದೆ.
©2025 Book Brahma Private Limited.