ಸಮರ ಸೇನಾನಿ

Author : ಗಿರೀಶ್ ಕೋಟೆ

Pages 361

₹ 600.00

Buy Now


Year of Publication: 2022
Published by: ಅಕ್ಷರ ಮಂಡಲ ಪ್ರಕಾಶನ

Synopsys

ಸಮರ ಸೇನಾನಿ ಗೀರೀಶ್‌ ಕೋಟೆ ಅವರ ಸಂಪಾದಕತ್ವದ  ಕೃತಿಯಾಗಿದೆ. ಸಿದ್ಧರಾಮಯ್ಯನವರ ಅಭಿನಂದನಾ ಕೃತಿಯಿದು. "ಜನಪರ ನಿಲುವು, ಜನರ ಸಂಕ್ಷೇಮ ಕಾರ್ಯಕ್ರಮಗಳು ಜನರಿಗೆ ಪರಿಣಾಮಕಾರಿಯಾಗಿ ತಲುಪುವಂತೆ ಆಡಳಿತ ನಡೆಸುವುದು ಎಂಬುದರ ಆಧಾರದಲ್ಲಿ ಜನರ ಬೆಂಬಲ ಗಳಿಸುತ್ತೇವೆ ಎಂಬ ಗಟ್ಟಿ ನಂಬುಕೆ ರಾಜಕೀಯ ಪಕ್ಷಗಳಲ್ಲಿ ಕಡಿಮೆಯಾಗುತ್ತಿದೆ. ಎಷ್ಟು ಜನಪರವಾಗಿ ಸ್ಪಂದಿಸಿದರೂ, ಹಣ ಕೊಡದೆ ಜನರು ಮತ ಹಾಕುವುದು ಕಷ್ಟವಿದೆ ಎಂದು ಭಾವಿಸುವ ರಾಜಕೀಯ ಧುರೀಣರು ಹೆಚ್ಚಾಗುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಸಿದ್ದರಾಮಯ್ಯನವರಂತಹ ನೇತಾರರು ಬೆರಳೆಣಿಕೆಯ ಸಂಖ್ಯೆಗೆ ಇಳಿಯುತ್ತಿರುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ಹಲವಾರು ಕಾರಣಗಳಿಂದ ಸಿದ್ದರಾಮಯ್ಯನವರು ಈಗಲೂ ಸಾಮಾನ್ಯ ಜನಸಮುದಾಯಗಳಿಗೆ ಆಶಾಕಿರಣದಂತಿದ್ದಾರೆ. ಅವರು ಗೆದ್ದುಬರಲಿ ಎಂದು ಹಾರೈಸುವವರು, ಅವರೇ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯಲಿ ಎಂದು ಆಶಿಸುವವರು ಸಿದ್ದರಾಮಯ್ಯನವರ ನಿಜವಾದ ಶಕ್ತಿಯಾಗಿದ್ದಾರೆ" ಎಂದು  ಜಯಪ್ರಕಾಶ ಬಂಜಗೆರೆ ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ. 

About the Author

ಗಿರೀಶ್ ಕೋಟೆ

ಗಿರೀಶ್ ಕೋಟೆ 18 ವರ್ಷ ಪತ್ರಕರ್ತನಾಗಿ ನಮ್ಮ ನಾಡು, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳಲ್ಲಿ ಮುಖ್ಯ ವರದಿಗಾರನಾಗಿ ಕೆಲಸ ಮಾಡಿದ್ದ ಅನುಭವ ಹೊಂದಿದ್ದಾರೆ. ಇವರ ಸ್ವತಂತ್ರ ಕೃತಿಗಳು : ಅಮೆರಿಕ ಅಂತರಂಗ ಸಂಪಾದಿತ ಕೃತಿಗಳು: ಪ್ರೀತಿಗಾಗಿ, ಸಮರ ಸೇನಾನಿ ...

READ MORE

Related Books