ಪಾದೇಕಲ್ಲು ವಿಷ್ಣು ಭಟ್ ಮತ್ತು ಮುಳಿಯ ಶಂಕರ ಭಟ್ಟ ಅವರ ಸಂಪಾದಿತ ಕೃತಜ್ಞತಾ ಕೃತಿ ʻಗುರುಗೌರವʼ. ಪಂಜಜೆ ಶಂಕರ ಭಟ್ಟ ಅವರ ಪರಿಚಯಮಾಡುವ ಈ ಪುಸ್ತಕವು ಅವರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ಗೌರವಗ್ರಂಥದ ರೂಪದಲ್ಲಿ ಬಿಡುಗಡೆಯಾಗಿದೆ. ಶಂಕರ ಭಟ್ಟ ಅವರು ದಕ್ಷಿಣ ಕನ್ನಡ ಜಿಲ್ಲೆಯ ಕನ್ನಡ ಭಾಷಾ ಪಂಡಿತರು. ಶಿಕ್ಷಕರಾಗಿ ಭಾಷೆ, ವಿದ್ಯಾರ್ಥಿಗಳ, ನಾಡಿನ ವಿಕಸನಕ್ಕೆ ಕಾರಣರಾದವರು. ಬಹುಭಾಷೆಗಳ ನಾಡಾದ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಮಾತೃಭಾಷೆಯ ಜೊತೆ ಕನ್ನಡ ಭಾಷೆಯನ್ನು ಕಲಿಯಲು ಮತ್ತು ಗೌರವಿಸಲು ಸಹಕಾರಿಯಾಗುವ ವಾತಾವರಣವನ್ನು ನಿರ್ಮಿಸಿ, ಕಲಿಕೆಗೆ ಹೆಚ್ಚಿನ ಒತ್ತನ್ನು ನೀಡುತ್ತಾ ಬಂದಿದಾದ್ದಾರೆ. ಭಾಷಾ ಪ್ರೀತಿಯ ಕಾಯಕದೊಂದಿಗೆ ಕೃಷಿ ಪ್ರತಿಕೋದ್ಯಮ, ಅನುವಾದ, ಪ್ರಕಾಶನ, ಮಕ್ಕಳ-ಶಿಕ್ಷಣ ಸೇರಿದಂತೆ ಬೇರೆ ಬೇರೆ ಚಟುವಟಿಕೆಗಳಲ್ಲಿ ಸದಾ ಸಕ್ರಿಯರಾಗಿದ್ದರು. ಹೀಗೆ ಪಂಜಜೆ ಶಂಕರ ಭಟ್ಟ ಅವರು ಬೆಳೆದು ಬಂದ ಬಗೆ, ಅವರ ಕೊಡುಗೆಗಳು ಹಾಗೂ ನಾಡಿನ ಜನಪ್ರಿಯ ಶಿಕ್ಷಕರಲ್ಲೊಬ್ಬರಾದ ಕುರಿತು ಈ ಕೃತಿಯು ಹೇಳುತ್ತದೆ.
©2024 Book Brahma Private Limited.