ಶ್ರೀ ಸೈಯ್ಯದ್ ಚಾಂದಸಾಬ ಇನಾಮದಾರ (ಫೂಲ್ ಛಡಿ) ಅವರ ವ್ಯಕ್ತಿತ್ವ ಮತ್ತು ಸಾಧನೆ ಕುರಿತ ‘ಸಮನ್ವಯ ಚೇತನ’ ಕೃತಿಯನ್ನು ಉಪನ್ಯಾಸಕ ರಾಘವೇಂದ್ರ ಹಾರಣಗೇರಾ ಅವರು ಸಂಪಾದಿಸಿದ್ದಾರೆ. ವೃತ್ತಿಯಿಂದ ಶಿಕ್ಷಕರಾಗಿದ್ದ ಚಾಂದಸಾಬ್ ಎಂದೇ ವಿದ್ಯಾರ್ಥಿ ಸಮೂಹದಲ್ಲಿ ಖ್ಯಾತಿ ಪಡೆದಿದ್ದ ಅವರ ಕುರಿತು ಈ ಕೃತಿಯು ಶಿಷ್ಯರು-ಗೆಳೆಯರು ನೀಡಿದ ಅಭಿನಂದನಾ ಗ್ರಂಥವೂ ಹೌದು.
ಪ್ರೊ. ಕಾಶಿನಾಥ ಅಂಬಲಗಿ ಅವರು ಕೃತಿಗೆ ಮುನ್ನುಡಿ ಬರೆದು ‘ಒಬ್ಬ ಪ್ರಾಮಾಣಿಕ ಹಾಗೂ ಜನಕಾಳಜಿಯ ಶಿಕ್ಷಕ ಏನಂತಹ ಜನಪರ, ಜೀವಪರ ಹಾಗೂ ವಿವೇಕವಂತ ನಾಗರಿಕ ಸಮಾಜ ತನ್ನ ಶಿಷ್ಯಲೋಕದ ಮೂಲಕ ಕಟ್ಟಿಕೊಡಬಲ್ಲ ಎಂಬುದಕ್ಕೆ ಚಾಂದಸಾಬ್ ಸಾಕ್ಷಿ. ಗೆಳೆಯ ಚಾಂದಪಾಷಾ (ಚಾಂದಸಾಬ್) ಅವರಿಗೆ ಇನ್ನೊಬ್ಬರ ಬಗ್ಗೆ ಅವರಿಗಿರುವ ಅಂತಃಕರಣ, ಅನುಕಂಪ., ಅನನ್ಯ ಭಾವ ನೋಡಿದಾಗ ದೇವ ಮಾನವರೆಂದರೆ ಮತ್ಯಾರೂ ಅಲ್ಲ; ನಮ್ಮ ಮಧ್ಯೆ ಇರುವ ಸೈಯ್ಯದ್ ಚಾಮದ ಪಾಷಾ ಅಂತಹವರು’ ಎನ್ನುವ ಮೂಲಕ ಅವರ ವ್ಯಕ್ತಿತ್ವದ ಘನತೆ-ಗೌರವವನ್ನು ತೋರಿದ್ದಾರೆ.
ಕೃತಿಯ ಸಂಪಾದಕ ರಾಘವೇಂದ್ರ ಹಾರಣಗೇರಾ ಅವರು ತಮ್ಮ ಮಾತುಗಳಲ್ಲಿ ‘ಚಾಂದಪಾಷಾ ಅವರ ಸೌಜನ್ಯ,ಪ್ರಾಮಾಣಿಕತೆ, ನಿಷ್ಠೆ, ಬದ್ಧತೆ, ಶಿಸ್ತು, ಸರಳತೆ ಮಾದರಿ. ಇಂತಹ ವ್ಯಕ್ತಿಗಳನ್ನು ಪರಿಚಯಿಸುವುದು ಸುಸಂಸ್ಕೃತ ಸೇವೆ. ಈ ಹಿನ್ನೆಲೆಯಲ್ಲಿ ಕರುಳ ಬಳ್ಳಿ, ಒಡಲಾಳ, ಶಿಷ್ಯಸಂಗಮ, ಭಾವಸಂಗಮ, ಕಾವ್ಯ ಸಂಗಮ, ಸಮನ್ವಯ ಸಂಗಮ ಹೀಗೆ ವಿವಿಧ ವಿಭಾಗಗಳಡಿ, ಚಾಂದಸಾಬ್ ಅವರ ವ್ಯಕ್ತಿತ್ವದ ವಿವಿಧ ಆಯಾಮಗಳನ್ನು ಕಟ್ಟಿಕೊಡಲು ಪ್ರಯತ್ನಿಸಲಾಗಿದೆ’ ಎಂದು ಅಭಿನಂದನಾ ಗ್ರಂಥದ ಸ್ವರೂಪವನ್ನು ವಿವರಿಸಿದ್ದಾರೆ.
©2024 Book Brahma Private Limited.