ಹೋರಾಟದ ಹೆಜ್ಜೆಗಳು

Author : ಡಿ.ಎಸ್. ವೀರಯ್ಯ

Pages 360

₹ 375.00




Year of Publication: 2002
Published by: ಪಿತಾಮಹ ಪ್ರಕಾಶನ
Address: #73, ಬನಶಂಕರಿ, 3ನೇ ಹಂತ, ಬಿಡಿಎ ಲೇಔಟ್, 8ನೇ ಮುಖ್ಯ ರಸ್ತೆ, ಗಿರಿನಗರ, ಬೆಂಗಳೂರು-560085
Phone: 9448091814

Synopsys

‘ಹೋರಾಟದ ಹೆಜ್ಜೆಗಳು’ ಕೃತಿಯು ಡಿ.ಎಸ್.ವೀರಯ್ಯ ಅವರ ಅಭಿನಂದನಾ ಗ್ರಂಥವಾಗಿದೆ. ಕೃತಿಯ ಬೆನ್ನುಡಿಯಲ್ಲಿ ಸಾಹಿತಿ ಸುಮತೀಂದ್ರ ನಾಡಿಗ್ ಅವರು, ‘ನೀರೆಲ್ಲಾ ಹರಿದು ಹೋದನಂತರ ಹೊಳೆಯನ್ನು ದಾಟುತ್ತೇವೆಂದು ಕಾದು ಕುಳಿತಿರಬೇಡಿ’ ಎಂದು ಸ್ವಾಮಿ ವಿವೇಕಾನಂದರು ಹೇಳಿದರು. ಡಿ.ಎಸ್.ವೀರಯ್ಯನವರು ನಿರಕ್ಷರತೆಯ, ಬಡತನದ ಅಸಮಾನತೆಯ, ನಿರುದ್ಯೋಗದ ಮತ್ತು ಸಾಮಾಜಿಕ ಅನ್ಯಾಯದ ಹೊಳೆಯನ್ನು ದಾಟುವುದಕ್ಕೆ ಶಿಕ್ಷಣದ ಸಂಘಟನೆಯ ಮತ್ತು ಪ್ರೀತಿ ವಿಶ್ವಾಸದ ಸೇತುವೆಗಳನ್ನು ಕಟ್ಟುತ್ತಲೇ ಬಂದಿದ್ದಾರೆ. ಇಲ್ಲಿನ ಲೇಖನಗಳಲ್ಲಿ ವೀರಯ್ಯನವರ ವ್ಯಕ್ತಿ ಚಿತ್ರಗಳಿವೆ. ಹೋರಾಟದ ದಾಖಲೆಗಳಿವೆ ಮತ್ತು ವಿಚಾರಧಾರೆಗಳಿವೆ. ವೀರಯ್ಯನವರ ಮಾತಿಗಿಂತ ಹೆಚ್ಚಾಗಿ ದುಡಿಯುವುದನ್ನು ನಂಬುತ್ತಾರೆ. ಸಮಾಜದಲ್ಲಿ ಅಂಚಿಗೆ ನೂಕಿಸಿಕೊಂಡಿದ್ದರ ಬಗ್ಗೆ, ದೌರ್ಜನ್ಯಕ್ಕೆ ಒಳಗಾದವರ ಬಗ್ಗೆ, ಒಳ್ಳೆಯ ಬದುಕಿನ ಕನಸು ಕಂಡಿದ್ದಾರೆ. ಬರೀ ಕನಸು ಕಾಣುತ್ತಿಲ್ಲ. ಡಾ.ಅಂಬೇಡ್ಕರ ಅವರ ವೈಚಾರಿಕತೆಯ  ಮಾರ್ಗದರ್ಶನದಲ್ಲಿ ಜನರ ಜೊತೆಗೆ ನಿಂತು ಹೋರಾಡುತ್ತಿದ್ದಾರೆ. ಸಮಾಜದ ಎಲ್ಲ ಶೋಷಿತ ಜಾತಿ-ವರ್ಗಗಳ ಪ್ರತಿನಿಧಿಯಾಗಿರುವ ವೀರಯ್ಯನವರ ಬಗ್ಗೆ ಮತ್ತು ಅವರ ಕೆಲಸಗಳ ಬಗ್ಗೆ ನಾಡಿನ ಚಿಂತಕರ ಲೇಖನಗಳು ಈ ಸಂಗ್ರಹದಲ್ಲಿವೆ’ ಎಂದು ಪ್ರಶಂಸಿಸಿದ್ದಾರೆ.

About the Author

ಡಿ.ಎಸ್. ವೀರಯ್ಯ

ಲೇಖಕ ಡಿ.ಎಸ್. ವೀರಯ್ಯ ಅವರು ಬೆಂಗಳೂರಿನ ಗಿರಿನಗರದವರು. ಎಂ.ಕಾಂ, ಎಲ್.ಎಲ್.ಬಿ, ಡಿ.ಪಿ.ಎಂ ಹಾಗೂ ಐಆರ್, ಡಿಪ್ಲೊಮಾ ಇನ್ ಜರ್ನಲಿಸಂ ಪದವೀಧರರು. ಪ್ರಸ್ತುತ ಡಿ. ದೇವರಾಜ್ ಟ್ರಕ್ಕ್ ಟರ್ಮಿನಲ್ ಅಧ್ಯಕ್ಷರು. ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ, ರಾಜ್ಯ ಕನ್ನಡ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.  ಕೃತಿಗಳು:  ಬಾಬಾ ಸಾಹೇಬ್ ಅಂಬೇಡ್ಕರ್ ಸಂದೇಶಗಳು. ಪ್ರಶಸ್ತಿ-ಪುರಸ್ಕಾರಗಳು: ಸಮಾಜ ರತ್ನ, ಕರ್ನಾಟಕ ರತ್ನ, ಬುದ್ಧ ರತ್ನ, ಬೆಸ್ಟ್ ಸಿಟಿಜನ್ ಆಫ್ ಇಂಡಿಯಾ, ಸರ್. ಎಂ.ವಿಶ್ವೇಶ್ವರಯ್ಯ ಆವಾರ್ಡ್, ಸಂಘಟನ ಶಿಲ್ಪಿ ಸೇರಿದಂತೆ  ಹಲವಾರು ಪ್ರಶಸ್ತಿ-ಗೌರವಗಳು ಲಭಿಸಿವೆ.  ...

READ MORE

Related Books