ಸಮಾಜವಾದಿ ಧುರೀಣ ಕಡಿದಾಳು ಶಾಮಣ್ಣ ಅವರ ಗೌರವ ಗ್ರಂಥ-ನಮ್ಮ ಶಾಮಣ್ಣ. ಲೇಖಕರಾದ ಡಿ.ಎಸ್. ನಾಗಭೂಷಣ, ಎಂ.ಜಿ. ನಟರಾಜ್ ಹಾಗೂ ಬಿ. ಚಂದ್ರೇಗೌಡ ಅವರು ಗ್ರಂಥ ಸಂಪಾದಕರು. ಕಡಿದಾಳು ಶಾಮಣ್ಣ ಅವರು ಭೂ ಸುಧಾರಣೆ ಸೇರಿದಂತೆ ರೈತರ ಪರವಾಗಿ ಹತ್ತು ಹಲವು ಹೋರಾಟಗಳನ್ನು ಮಾಡಿದವರು. ಲೋಹಿಯಾವಾದಿಗಳು. ರೈತರ ಕೃಷಿ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡುವ ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧ ಮಾತನಾಡಿದವರು. ಕೃಷಿ ಉತ್ಪನ್ನಗಳಿಗೆ ಬೆಲೆ ನಿಗದಿಪಡಿಸುವ ಹಕ್ಕು ಕೇವಲ ರೈತರಿಗೆ ಮಾತ್ರ ಇದೆ ಎಂದು ಪ್ರತಿಪಾದಿಸಿದವರು. ಕಡಿದಾಳು ಶಾಮಣ್ಣನವರ ಅಭಿಮಾನಿಗಳು ಜೊತೆಗೂಡಿ ಅರ್ಪಿಸಿದ ಗೌರವ ಗ್ರಂಥವಿದು.
©2025 Book Brahma Private Limited.