‘ನನ್ನಿಯ ನೇಕಾರ ನಾಡೋಜ ಕೆ.ಜಿ.ಎನ್ 88’ ಕನ್ನಡದ ಶ್ರೇಷ್ಠ ವಿಮರ್ಶಕ ಪ್ರೊ.ಕೆ.ಜಿ. ನಾಗರಾಜಪ್ಪನವರಿಗೆ 88 ವರ್ಷದ ತುಂಬಿದ ಹಿನ್ನೆಲೆಯಲ್ಲಿ ಸಾಹಿತ್ಯಲೋಕದ ದಿಗ್ಗಜರು, ಕೆ.ಜಿ.ನಾಗರಾಜಪ್ಪನವರ ಆಪ್ತರು ಸಲ್ಲಿಸಿದ ಅಭಿನಂದನಾ ಗ್ರಂಥ. ಡಾ.ಎಂ.ಎಸ್. ಆಶಾದೇವಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಜಿ.ಆರ್. ಮಂಜೇಶ್ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ.
ಈ ಕೃತಿಯಲ್ಲಿ ಡಾ. ಜಿ.ಎಸ್.ಶಿವರುದ್ರಪ್ಪ ಅವರ 'ನಮ್ಮ ನಾಗರಾಜಪ್ಪ', ಅಗ್ರಹಾರ ಕೃಷ್ಣಮೂರ್ತಿ ಅವರ 'ಜ್ಞಾನ, ಸತ್ಯಜೀವಿ ಗುರು', ಎಸ್.ಜಿ.ಸಿದ್ಧರಾಮಯ್ಯ ಅವರ 'ಒಂಟಿ ಸಲಗ', ಬಾ.ಹ ರಮಾಕುಮಾರಿ ಅವರ 'ವಿಮರ್ಶೆಯ ನೇರ ಮಾತುಗಾರ', ಪ್ರೊ.ಪದ್ಮಾ ಶಿವರುದ್ರಪ್ಪ ಅವರ 'ಅಕ್ಕರೆಯ ನೆರಳು', ಆಶಾದೇವಿ ಅವರ 'ಸಂದರ್ಶನ', ಡಾ.ಯು.ಆರ್.ಅನಂತಮೂರ್ತಿ 'ಮರುಚಿಂತನೆ', ಪ್ರೊ.ಹೆಚ್.ಎಸ್. ಶಿವಪ್ರಕಾಶ್ ಅವರ 'ಅನುಶ್ರೇಣಿ ಯಜಮಾನಿಕೆ', ಡಾ.ಪೋಲಂಕಿ ರಾಮಮೂರ್ತಿ ಅವರ 'ಮರುಚಿಂತನೆ ಕುರಿತು', ಪ್ರೊ.ಶಿವರಾಮಯ್ಯ ಅವರ 'ವಿಮರ್ಶಕ ಅಘೋರಿ', ಮೀನಾಕ್ಷಿ ಬಾಳಿ ಅವರ 'ಭಕ್ತಿ ಮತ್ತು ಮಹಿಳೆ ನಾಗರಾಜಪ್ಪನವರ ಗ್ರಹಿಕೆಗಳು', ರಾಜೇಂದ್ರ ಚೆನ್ನಿ ಅವರ 'ಕೆ.ಜಿ.ನಾಗರಾಜಪ್ಪನವರ ಮರುಚಿಂತನೆ', ಓ.ಎಲ್. ನಾಗಭೂಷಣಸ್ವಾಮಿ ಅವರ 'ಅನುಶ್ರೇಣಿ ಯಜಮಾನಿಕೆ' , ಡಾ.ರಹಮತ್ ತರೀಕೆರೆ ಅವರ 'ಅವೈದಿಕ ದರ್ಶನಗಳ ಶೋಧಕ', ಎಸ್. ನಟರಾಜ ಬೂದಾಳು ಅವರ 'ಕೆ.ಜಿ.ನಾಗರಾಜಪ್ಪನವರ ಚಿಂತನೆಗಳ ಸಾಂಸ್ಕೃತಿಕ ಮಹತ್ವ', ಪ್ರೊ.ಕೆ.ಎಂ. ರಾಜಗೋಪಾಲ ಅವರ 'ಇಕ್ಕಟ್ಟು ಬಿಕ್ಕಟ್ಟು ಒಂದು ಟಿಪ್ಪಣಿ', ಲಕ್ಷ್ಮಣ ಕೊಡಸೆ ಅವರ 'ಕನ್ನಡ ವೈಚಾರಿಕತೆಯ ಗಟ್ಟಿಧ್ವನಿ', ಡಾ.ಪ್ರಮೀಳಾ ಮಾಧವ್ ಅವರ 'ಪ್ರೊ.ಕೆ.ಜಿ.ನಾಗರಾಜಪ್ಪನವರ ದೇವಾಂಗ ಸಂಸ್ಕೃತಿ ಒಂದು ಪರಿಚಯ', ಡಾ.ಕೇಶವ ಶರ್ಮ ಕೆ ಅವರ 'ಮರುಚಿಂತನೆಯ ಮರುಚಿಂತನೆ', ಪ್ರೊ. ಸಾಹಿತ್ಯ ಮೀಮಾಂಸೆ, ಎಲ್. ಪುರುಷೋತ್ತಮ ಅವರ 'ನಾ ಕಂಡ ನಮ್ಮ ಪ್ರೊಫೆಸರ್', ಡಾ.ಬಿ.ವಿ. ವಸಂತಕುಮಾರ್ ಅವರ 'ಶಕ್ತಿಯ ಅನ್ವೇಷಕ ಕೆ.ಜಿ.ಎನ್'. ಶಂಕರ ಮಾ. ಬುಚಡಿ ಅವರ 'ಮರುಚಿಂತನೆಯ ಹರಿಕಾರ' ಹಾಗೂ ಕೆ.ಜಿ. ವೆಂಕಟರಮಣಯ್ಯ ಅವರ 'ವಿಚಾರವಾದಿ' ಲೇಖನಗಳು ಸಂಕಲನಗೊಂಡಿವೆ.
©2024 Book Brahma Private Limited.