ಅನನ್ಯ- ಇಂದಿರಾ ಶಿವಣ್ಣ ಅಭಿನಂದನಾ ಗ್ರಂಥ

Author : ಗೀತಾ ಶೆಣೈ

Pages 300

₹ 200.00




Year of Publication: 2009
Published by: ದೀಪಾಂಜಲಿ ಟ್ರಸ್ಟ್
Address: ಬಿ.ಟಿ.ಎಂ. ಬಡಾವಣೆ, ಬೆಂಗಳೂರು- 560068
Phone: 9845535026

Synopsys

ಅನನ್ಯ-ಲೇಖಕಿ ಇಂದಿರಾ ಶಿವಣ್ಣನವರ ಅಭಿನಂದನಾ ಗ್ರಂಥವಾಗಿದೆ. ಇದನ್ನು ಸಂಪಾದಿಸಿದವರು ಡಾ. ಗೀತಾ ಶೆಣೈ. ಇಂದಿರಾ ಶಿವಣ್ಣ ಅವರು ಕತೆ, ಕಾದಂಬರಿ, ಪ್ರವಾಸ ಕಥನ, ಜೀವನ ಚರಿತ್ರೆ, ಆತ್ಮಕಥಾನಕ ಇತ್ಯಾದಿ ಪ್ರಕಾರಗಳಲ್ಲಿ ಅನೇಕ ಗ್ರಂಥಗಳನ್ನು ಬೆಳಕಿಗೆ ತಂದು ಪ್ರಸಿದ್ಧ ಲೇಖಕಿಯಾಗಿ ಗುರುತಿಸಿಕೊಂಡಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಉಪಾಧ್ಯಕ್ಷೆಯಾಗಿಯೂ ಕಾರ್ಯನಿರ್ವಹಿಸಿದ್ದು, ಅನೇಕ ಸಾಮಾಜಿಕ ಧಾರ್ಮಿಕ ಸಂಘಟನೆಗಳ ನೇತೃತ್ವದೊಂದಿಗೆ ಸಮಾಜಸೇವೆಯನ್ನು ನಿಭಾಯಿಸಿದ್ದಾರೆ. ಕನ್ನಡದ 90 ಮಂದಿ ಲೇಖಕಿಯರ ಬದುಕು-ಸಾಧನೆಯ ಕುರಿತು ವಿವಿಧ ಲೇಖಕಿಯರು ಬರೆದ ಗ್ರಂಥಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ.

ಪ್ರಸ್ತುತ ಗ್ರಂಥದಲ್ಲಿ ಇಂದಿರಾ ಅವರ ಆತ್ಮೀಯರು, ಸಹ ಲೇಖಕಿಯರು ಮತ್ತು ಬಂಧುಗಳು ಅವರ ಸಾಧನೆಯ ಕುರಿತು ಬರೆದ ಲೇಖನಗಳೊಂದಿಗೆ, ಅವರ ಸಾಹಿತ್ಯದ ಅವಲೋಕನವನ್ನು ನಡೆಸಿದ ವಿವಿಧ ಲೇಖನಗಳು ಕೂಡಾ ಇವೆ. ಗ್ರಂಥದ ಕೊನೆಭಾಗದಲ್ಲಿ ಕನ್ನಡ ಮಹಿಳಾ ಸಾಹಿತ್ಯದ ಕುರಿತು ಹಲವು ಮಾಹಿತಿಪೂರ್ಣ ಲೇಖನಗಳಿವೆ.

 

About the Author

ಗೀತಾ ಶೆಣೈ
(13 June 1954)

ಗೀತಾ ಶೆಣೈ ಕನ್ನಡದ ಪ್ರಮುಖ ಲೇಖಕಿ. ಇವರು 1954 ಜೂಬ್ 13 ರಂದು ದಕ್ಷಿಣ ಜಿಲ್ಲೆಯಲ್ಲಿ ಜನಿಸಿದರು. ಹಂಪಿಯಿಂದ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಪಿಹೆಚ್.ಡಿ, ಪದವಿ ಪಡೆದಿದ್ದಾರೆ. ಇಂದಿರಾಗಾಂಧಿ ಮಹಿಳಾ ಅಧ್ಯಯನದಲ್ಲಿ ಸಿಡಬ್ಲ್ಯೂಇಡಿ ಕೋರ್ಸ್ ಮುಗಿಸಿದ್ದಾರೆ, ಜೀವನ ಚರಿತ್ರೆ, ಅನುವಾದ ಮತ್ತು ಮಹಿಳಾ ಅಧ್ಯಯನ ಇತ್ಯಾದಿ ಪ್ರಕಾರಗಳಲ್ಲಿ 20ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವರ ಮೊದಲ ಕೃತಿ ಝುಂಪಾ ಲಾಹಿರಿಯವರ ಇಂಟರ್‍ಪ್ರಿಟರ್ ಆಫ್ ಮ್ಯಾಲಡೀಸ್ ಕಥಾಸಂಕಲನದ ಅನುವಾದ `ಬೇನೆಗಳ ದುಭಾಷಿ'.   ಬೇನೆಗಳ ದುಭಾಷಿ, ಪರಿಸರ ಅರ್ಥಶಾಸ್ತ್, ಮಧ್ಯಕಾಲೀನ ಭಾರತ, ಸಮಾಜಶಾಸ್ತ್ರದ ಸ್ಥಾಪಕ ಪಿತಾಮಹರು, ಪ್ರಾರಂಭಿಕ ಹಂತದ ...

READ MORE

Related Books