‘ನುಡಿರಂಜನೆ’ ಡಾ.ನಿರಂಜನ ವಾನಳ್ಳಿ ಐವತ್ತನೇ ಜನ್ಮದಿನದ ಗೌರವ ಗ್ರಂಥ. ಈ ಗ್ರಂಥವನ್ನು ಲೇಖಕ ಸಿಬಂತಿ ಪದ್ಮನಾಭ ಅವರು ಸಂಪಾದಿಸಿದ್ದಾರೆ. ಪತ್ರಿಕೋದ್ಯಮದಲ್ಲೇ ತಮ್ಮ ವೃತ್ತಿ-ಪ್ರವೃತ್ತಿ, ಸಂತೋಷ-ಸಂತೃಪ್ತಿಗಳೆಲ್ಲವನ್ನೂ ಕಂಡುಕೊಂಡಿರುವ ಡಾ. ನಿರಂಜನ ವಾನಳ್ಳಿಯವರು, ಸಮೂಹ ಮಾಧ್ಯಮ ಹಾಗೂ ಸಂವಹನ ಪ್ರಾಧ್ಯಾಪಕರಾಗಿ ಶೈಕ್ಷಣಿಕವಾಗಿ ಗುರುತಿಸಿಕೊಂಡರೆ. ವಿಜಯ ಕರ್ನಾಟಕ ಉದಯವಾಣಿಗಳಂತಹ ದೈನಿಕಗಳಿಗೆ ಅಂಕಣಕಾರರು. ಒಮಾನ್ ಎಂಬ ಒಗಟು ಪುಸ್ತಕ ರಚಿಸಿದ್ದಾರೆ. ಅದು ಅವರಿಗೆ ಹೆಸರು ತಂದುಕೊಟ್ಟ ಆವಾಸೀ ಕಥನವೂ ಹೌದು. ‘ಸುದ್ದಿಯಷ್ಟೇ ಅಲ್ಲ’ ಎಂಬ ತಮ್ಮ ಮೊದಲ ಕೃತಿಗೇ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ ಪಡೆದುಕೊಂಡಿದ್ದಾರೆ.
ಒಟ್ಟು 31 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಸೋಡಿಗದ್ದೆ ಚೆಲುವೆಯರು, ಎರಡು ದಡಗಳ ನಡುವೆ, ಮೊಗೆದಷ್ಟೂ ನೆನಪುಗಳು, ಪ್ರೀತಿಗೆಷ್ಟು ಮುಖಗಳು, ಹುಡುಕಾಟದ ಹೊತ್ತು, ತುಡಿದ ಮನ, ಮಾಧ್ಯಮ ವ್ಯಾಯೋಗ, ಕಾಬಾಳೆ ಮತ್ತು ಪ್ರೀತಿ ಮುಂತಾದವು ಕೃತಿಗಳು. ರೈತ ವೈದ್ಯ ಕುಟುಂಬದಿಂದ ಬಂದಿದ್ದು, ತಮ್ಮ ಬೇರುಗಳನ್ನು ಮರೆಯದಿರುವುದು ಅವರ ಬದುಕು-ಬರಹಗಳಿಂದ ವ್ಯಕ್ತವಾಗುತ್ತದೆ. ಗೆಳೆಯರೆಲ್ಲ ಒಟ್ಟಾಗಿ. ಅರ್ಪಿಸಿದ ಗೌರವ ಗ್ರಂಥ -ನುಡಿರಂಜನ.
©2024 Book Brahma Private Limited.