ಉರಿಯ ಬೆಳದಿಂದಗಳು : ಭಾಗ -2

Author : ಸರ್ಫ್ರಾಜ್

Pages 530

₹ 500.00




Year of Publication: 2011
Published by: ನೇಕಾರ ಪ್ರಕಾಶನ
Address: ನೇಕಾರ ಪ್ರಕಾಶನ, ಗುರುಮಂದಿರ ರಸ್ತೆ, ಸೊರಬ-577429 ಶಿವಮೊಗ್ಗ ಜಿಲ್ಲೆ
Phone: 9141833556

Synopsys

ಎನ್. ಹುಚ್ಚಪ್ಪ ಮಾಸ್ತರ್ ಅವರ ಅಭಿನಂದನಾ ಗ್ರಂಥ-ಭಾಗ-2. ಹುಚ್ಚಪ್ಪ ಮಾಸ್ತರ್ ಮಲೆನಾಡಿನ ಭಾಗದಲಿ ದೊಡ್ಡ ಹೆಸರು. ಕರ್ನಾಟಕದ ಜಾನಪದ ಸಾಹಿತ್ಯ ಹಾಗೂ ರಂಗಭೂಮಿಯಲ್ಲಿ ಬಹುದೊಡ್ಡ ಸಾಧನೆ ಮಾಡಿರುವ ಹಿರಿಯ ವಿದ್ವಾಂಸರು, ಕರ್ನಾಟಕದ ಅಕಾಡೆಮಿಕ್ ಕ್ಷೇತ್ರದಲ್ಲಿ ಚಿರಪರಿಚಿತರು. ಗಾಯನ, ನಟನೆ, ಸಂಘಟನೆ ಕೇತ್ರ ಕಾರ್ಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅಲ್ಲದೆ ಅವರು ಗಾಂಧಿ, ಅಂಬೇಡ್ಕರ್, ಲೋಹಿಯಾ ವಾದವನ್ನು ತಮ್ಮ ಬದುಕಿನಲಿ ಅಳವಡಿಸಿಕೊಂಡಿದ್ದಾರೆ. ಅವರಿಗೆ ಆದರ್ಶ ಮತ್ತು ವಾಸ್ತವ ಬೇರೆ ಬೇರೆಯಲ್ಲ. ಆಲೋಚಿಸಿದ್ದನ್ನು ಬದುಕಿ ಬಾಳಿದ ಅಪರೂಪದ ವ್ಯಕ್ತಿಯಾಗಿದ್ದಾರೆ. ಹಸಲ. ಹಕ್ಕಿಪಿಕ್ಕಿ, ಗೊಂಡ, ದೀವರು ಮೊದಲಾದ ಬುಡಕಟ್ಟು ಜನಾಂಗಗಳ ಬಗ್ಗೆಯೂ ಬರೆದಿದ್ದಾರೆ. ದಮನಿತರ ಪರವಾಗಿ ಹೋರಾಟ ಮಾಡಿ ಅವರಿಗೆ ಭೂಮಿ ಹಕ್ಕುಪತ್ರವನ್ನು ಕೊಡಿಸಿದ್ದಾರೆ. ವಸತಿ ಶಾಲೆಯ ಶಿಕ್ಷಕರಾಗಿದ್ದುಕೊಂಡು ಇಷ್ಟೆಲ್ಲಾ ಸಾಧಿಸಲು ಒಬ್ಬ ವ್ಯಕ್ತಿಗೆ ಸಾಧ್ಯವೇ?- ಎಂದು ನಮಗೆ ನಾವೇ ಪ್ರಶ್ನಿಸಿಕೊಳ್ಳುವುದರ ಮಟ್ಟಿಗೆ ಅವರು ಸಾಧಿಸಿ ತೋರಿಸಿದ್ದಾರೆ. ತಮ್ಮ ಬದುಕನ್ನೇ ಒಂದು ಘನವಾದ ವ್ರತದಂತೆ ಬಾಳಿ ಬದುಕಿ ತೋರಿಸಿರುವ ಹುಚ್ಚಪ್ಪ ಮಾಸ್ತರ್‌ರವರ ಅಭಿನಂದನಾ ಗ್ರಂಥವನ್ನು ಎರಡು ಭಾಗಗಳಲ್ಲಿ ಹೊರತರಲಾಗಿದ್ದು, ಪ್ರಸ್ತುತ ಕೃತಿ ಉರಿಯ ಬೆಳದಿಂದಳು ಭಾಗ -2.

About the Author

ಸರ್ಫ್ರಾಜ್

ಸರ್ಫ್ರಾಜ್ ಕನ್ನಡ ಎಂ.ಎ ಪದವೀಧರರು. ಸೊರಬ ಚಿಕ್ಕಮಾಕೊಪ್ಪ ಎಂಬ ಚಿಕ್ಕ ಹಳ್ಳಿಯಲ್ಲಿ ಹುಟ್ಟಿ ಬೆಳೆದವರು. ಕೆಲವು ಮುಸ್ಲೀಂ ಕುಟುಂಬಗಳು ಬಹುಸಂಖ್ಯಾತ ಹಿಂದೂ ಕುಟುಂಬಗಳ ಜೊತೆಯಲ್ಲಿ ಸಹಬಾಳ್ವೆ ಮಾಡುತ್ತಿರುವ ಭಾವೈಕ್ಯತೆಯ ಪ್ರತೀಕದಂತಿರುವ ಹಳ್ಳಿಯದು. ಇಂತಹ ವಾತಾವರಣದಲ್ಲಿ ಸರ್ಫ್ರಾಜ್ ತಮ್ಮ ಬಾಲ್ಯ ಜೀವನ ಮತ್ತು ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದರು. ನಂತರ ಉನ್ನತ ವ್ಯಾಸಂಗವನ್ನು ಸಾಗರ ಮತ್ತು ಶಿವಮೊಗ್ಗಗಳಲ್ಲಿ (ಕುವೆಂಪು ವಿ.ವಿ. ಬಿ.ಆರ್. ಪ್ರಾಜೆಕ್ಟ್) ಮಾಡಿದರು, ವಿದ್ಯಾರ್ಥಿಯಾಗಿರುವಾಗಲೇ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಗೀತಗಳ ಬಗ್ಗೆ ಅಪಾರ ಪ್ರೇಮವನ್ನು ಬೆಳೆಸಿಕೊಂಡವರು. ಹಿಂದೂ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿರುವ ಅವರು, ಕನ್ನಡದ ...

READ MORE

Related Books