ಲೇಖಕ ಟಿ. ನಾಗರಾಜು ಅವರ ಲೇಖನ ಕೃತಿ ʻಅಡಿಗಡಿಗೂ ಗುರುವಂದನೆ ಮತ್ತು ಅನವರತ ಅಂತರಂಗ ಮೃದಂಗʼ. ಕರ್ನಾಟಕ ಸಂಗೀತದ ಪ್ರಧಾನ ಅಂಗವಾದ ಮೃದಂಗ ಲಯವಾದ್ಯದ ಬಗ್ಗೆ ತ್ರಿಮೂರ್ತಿ ಕಲಾವಿದರುಗಳ ಹೆಸರಿನಲ್ಲಿ ಲೇಖಕರು ತಮ್ಮದೇ ಆದ ಬೆಳಕು ಚೆಲ್ಲಿದ್ದಾರೆ. ಅವರು ಪಾಲ್‌ಘಾಟ್ ಮಣಿ ಅಯ್ಯರ್, ಪಳನಿ ಸುಬ್ರಹ್ಮಣ್ಯ ಪಿಳ್ಳೈ, ರಾಮನಾಥಪುರಂ ಸಿ.ಎಸ್. ಮುರುಗಭೂಪತಿ. ಈ ಮೂವರೂ ತಮ್ಮ ಭಾಲ್ಯದಲ್ಲಿ ಅಂದಿಗೆ ರೂಢಿಯಲ್ಲಿದ್ದ ಗುರುಕುಲ ವಾಸದಲ್ಲಿ ಸಂಗೀತ ಶಿಕ್ಷಣ ಪಡೆದು, ಮೃದಂಗ ಸಹಕಾರ, ತನಿಗಳಲ್ಲಿ ವೈವಿಧ್ಯತೆ ತಂದುಕೊಟ್ಟ ಅತ್ಯುತ್ತಮ ಕಲಾವಿದರು ಎಂಬುವುದನ್ನು ನಿರೂಪಿಸುತ್ತಾ ಈ ಕೃತಿಯಲ್ಲಿ ಅವರಿಗೆ ವಂದನೆಗಳನ್ನು ಅರ್ಪಿಸುತ್ತಾರೆ.
©2025 Book Brahma Private Limited.