ಆರ್ಯ (ಆಚಾರ್ಯ ಪಿ.ಆರ್) ಅವರು ಚಿತ್ರಕಲಾವಿದ, ಸಾಹಿತಿ, ನಾಟಕಕಾರರಾಗಿ ಬಹುಮುಖ ಪ್ರತಿಭೆಯುಳ್ಳವರು. ಉಡುಪಿಯ ಅಷ್ಟಮಠಗಳಲ್ಲೊಂದಾದ ಶಿರೂರು ಮಠದ ಸ್ವಾಮೀಜಿಯ ಪಟ್ಟವನ್ನು ತ್ಯಜಿಸಿ ಜಡ್ಡು ಕಟ್ಟಿದ ಸಂಪ್ರದಾಯಕ್ಕೆ ಶರಣು ಹೊಡೆದು ಪೀಠ ತ್ಯಾಗ ಮಾಡಿದವರು. ಬ್ಯಾಂಕಿನಲ್ಲಿ ವೃತ್ತಿ ಜೀವನವನ್ನು ಆರಿಸಿಕೊಂಡು ಚಿತ್ರಕಲೆ, ಸಾಹಿತ್ಯ ಕೃಷಿಯನ್ನು ಮುಂದುವರೆಸಿ ಚಿತ್ರಕಲೆಯ ಏಕವ್ಯಕ್ತಿ ಪ್ರದರ್ಶನಗಳನ್ನು ದೇಶ ವಿದೇಶಗಳಲ್ಲಿ ತಮ್ಮ ಕಲಾಸಕ್ತಿಯನ್ನು ತೋರಿದವರು. ಇಂತಹ ಧೀಮಂತ ಕಲಾ ಪ್ರತಿಭೆಯ ಸಾಹಿತ್ಯ, ಕಲಾಪ್ರೇಮವನ್ನು ಕಂಡ ಅವರ ಶಿಷ್ಮವೃಂದ, ಸಾಹಿತ್ಯ ಮಿತ್ರರೆಲ್ಲರೂ ಅವರ ಕುರಿತಾದ ಒಂದು ವಿಮರ್ಶಾತ್ಮಕವಾದ ಗ್ರಂಥವನ್ನು ಸಾಹಿತಿ ಗಿರಡ್ಡಿ ಗೋವಿಂದರಾಜರ ಪ್ರಧಾನ ಸಂಪಾದನೆಯಲ್ಲಿ ’ಆರ್ಯಾವರ್ತ’ ಎಂಬ ವಿಮರ್ಶಾ ಲೇಖನಗಳ ಸಂಗ್ರಹಗಳೇ ಅವರ ಅಭಿನಂದನಾ ಗ್ರಂಥವಾಗಿಯೂ ಈ ಪುಸ್ತಕ ರೂಪವನ್ನು ಪಡೆಯಿತು.
©2024 Book Brahma Private Limited.